ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್‌ನಿಂದ ಅವಧಿಗೆ ಮೊದಲೇ ಕೆಲ ಪಡೆ ವಾಪಸ್: ಅಮೆರಿಕಾ (Afghanistan | U.S. Defense Secretary | Robert Gates | Abdul Rahim Wardak)
Bookmark and Share Feedback Print
 
ಅಫಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕಾದ ರಕ್ಷಣಾ ಪಡೆಗಳಲ್ಲಿ ಕೆಲವನ್ನು ಅವಧಿಗೆ ಮೊದಲೇ ದೇಶಕ್ಕೆ ಹಿಂತಿರುಗಿಸಲಾಗುತ್ತದೆ ಎಂದು ಪ್ರಸಕ್ತ ಯುದ್ಧ ಭೂಮಿಯ ತರಬೇತಿ ಶಿಬಿರವೊಂದರಲ್ಲಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.

2011ರ ಜುಲೈ ತಿಂಗಳಲ್ಲಿ ರಕ್ಷಣಾ ಪಡೆಗಳನ್ನು ಅಫಘಾನಿಸ್ತಾನದಿಂದ ಹಿಂದಕ್ಕೆ ಪಡೆಯಲು ಆರಂಭಿಸಲಾಗುತ್ತದೆ ಎಂದು ಅಧ್ಯಕ್ಷ ಬರಾಕ್ ಒಬಾಮಾ ಅವರು ಹೇಳಿದ್ದರೂ, ಪರಿಸ್ಥಿತಿಗೆ ಅನುಗುಣವಾಗಿ ಅದಕ್ಕೆ ಮೊದಲೇ ಕೆಲವು ಪಡೆಗಳನ್ನು ವಾಪಸ್ ಮಾಡುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಗೇಟ್ಸ್ ವಿವರಣೆ ನೀಡಿದ್ದಾರೆ.

ಅಫಘಾನಿಸ್ತಾನದ ಪೋಲ್ ಚಾಕಿ ಎಂಬ ತರಬೇತಿ ಶಿಬಿರ ನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧ್ಯಕ್ಷರು ಹೇಳಿರುವ ಅವಧಿಗಿಂತ ಮುಂಚೆಯೇ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ. ಇದೇ ಸಂಬಂಧ ಅಮೆರಿಕಾ ಮತ್ತು ಇಂಗ್ಲೆಂಡ್ ಮಾರ್ಗದರ್ಶಕರು ಅಫಘಾನಿಸ್ತಾನದ ಯುವಕರಿಗೆ ಮಿಲಟರಿ ತರಬೇತಿ ನೀಡುತ್ತಿದ್ದಾರೆ ಎಂದರು.

ದೇಶದ ರಕ್ಷಣೆಯ ಹೊಣೆಯನ್ನು ಹೊತ್ತುಕೊಳ್ಳಲು ತನ್ನ ದೇಶದ ರಕ್ಷಣಾ ಪಡೆಗಳು ಕಾಯುತ್ತಿವೆ ಎಂದು ಇದೇ ಸಂದರ್ಭದಲ್ಲಿ ಅಫಘಾನಿಸ್ತಾನದ ರಕ್ಷಣಾ ಸಚಿವ ಅಬ್ದುಲ್ ರಹೀಮ್ ವಾರ್ದಾಕ್ ತಿಳಿಸಿದ್ದಾರೆ.

ನಮ್ಮ ಪಡೆಗಳೀಗ ಸಶಕ್ತವಾಗಿವೆ. ಸಾಕಷ್ಟು ತರಬೇತಿಗಳನ್ನು ಪಡೆದುಕೊಂಡಿವೆ. ಹಾಗಾಗಿ ದೇಶದ ರಕ್ಷಣೆಯನ್ನು ವಹಿಸಿಕೊಳ್ಳಲು ಕಾತರದಿಂದಿವೆ ಎಂದು ಸಚಿವರು ಹೇಳಿದ್ದಾರಾದರೂ, ಅಮೆರಿಕಾ ಯಾವಾಗ ಹಸ್ತಾಂತರಿಸಲಿದೆ ಎಂಬ ವಿಚಾರದ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

ಅಫ್ಘಾನ್ ಮತ್ತು ಇರಾಕ್ ಯುದ್ಧಗಳಿಂದಾಗಿ ಅಮೆರಿಕಾದ ಆರ್ಥಿಕ ಪರಿಸ್ಥಿತಿ ಜರ್ಜರಿತವಾಗಿದ್ದು, ಆದಷ್ಟು ಬೇಗ ಇವೆರಡೂ ದೇಶಗಳಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಒತ್ತಡದಲ್ಲಿ ಒಬಾಮಾ ಇದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕಾದ ಸಾವಿರಾರು ಯೋಧರು ಯುದ್ಧ ಭೂಮಿಗಳಲ್ಲಿ ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಇರಾಕ್‌ನಲ್ಲಿ ಬಹುತೇಕ ಶಾಂತಿ ನೆಲೆಸುವ ಹಂತಕ್ಕೆ ತಲುಪಿದೆ. ಅಫಘಾನಿಸ್ತಾನದಲ್ಲೂ ತಾವು ವಿಜಯದ ಹತ್ತಿರ ತಲುಪಿದ್ದೇವೆ. ಇನ್ನು ಒಂದೆರಡು ವರ್ಷಗಳಲ್ಲಿ ನಾವು ಆ ದೇಶಗಳನ್ನು ಸ್ವತಂತ್ರವಾಗಿ ಕಾರ್ಯಾಚರಿಸುವಂತೆ ಅನುವು ಮಾಡಿಕೊಡಲಿದ್ದೇವೆ ಎಂದು ಅಮೆರಿಕಾ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ