ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪುಟಿನ್ ಭಾರತಕ್ಕೆ; ರಕ್ಷಣಾ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ (India | defence deal | Russia | Vladimir Putin)
Bookmark and Share Feedback Print
 
ರಷ್ಯಾ ಪ್ರಧಾನ ಮಂತ್ರಿ ವ್ಲಾದಿಮಿರ್ ಪುಟಿನ್ ಎರಡು ದಿನಗಳ ಭಾರತ ಭೇಟಿಗಾಗಿ ನಾಳೆ ನವದೆಹಲಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಹಲವಾರು ಸಮಯಗಳಿಂದ ಬಾಕಿ ಉಳಿದಿರುವ 'ಅಡ್ಮಿರಲ್ ಗೋರ್ಷ್‌ಕೋವ್' ವಿಮಾನವಾಹಕ ನೌಕೆ ಮತ್ತು ನಾಲ್ಕು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕುವ ಸಾಧ್ಯತೆಗಳಿವೆ.

2009ರ ಡಿಸೆಂಬರ್ ತಿಂಗಳಲ್ಲಿ ರಷ್ಯಾಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭೇಟಿ ನೀಡಿದ ಮೂರು ತಿಂಗಳ ನಂತರ ಮಹತ್ವಾಕಾಂಕ್ಷೆಯೊಂದಿಗೆ ಭಾರತ ಪ್ರವಾಸ ಮಾಡುತ್ತಿರುವ ಪುಟಿನ್, ದ್ವಿಪಕ್ಷೀಯ ತಾಂತ್ರಿಕತೆ ಮತ್ತು ಇಂಧನ ಸಹಕಾರಿ ನೀತಿಗಳನ್ನು ನೂತನ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆಯಲ್ಲಿದ್ದಾರೆ.

ಆಧುನಿಕತೆಯ ಅನ್ವೇಷಣೆಗಾಗಿ ರಷ್ಯಾ ತನ್ನ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದ್ದು, ರಾಜತಾಂತ್ರಿಕ ಮೂಲಗಳ ಪ್ರಕಾರ ಎರಡೂ ದೇಶಗಳು ಉತ್ಕೃಷ್ಟ ತಂತ್ರಜ್ಞಾನದಲ್ಲಿ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಬಯಸುತ್ತಿವೆ.

ಅಡ್ಮಿರಲ್ ಗೋರ್ಷ್‌ಕೋವ್ ಹಸ್ತಾಂತರದ ಅಂತಿಮ ಒಪ್ಪಂದದೊಂದಿಗೆ ನಾಲ್ಕು ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಲಿವೆ. ಈ ಸಂದರ್ಭದಲ್ಲಿ ಐದನೇ ಪೀಳಿಗೆಯ ಯುದ್ಧ ವಿಮಾನಗಳ ಜಂಟಿ ಉತ್ಪಾದನೆ ಕುರಿತ ಅಂತಿಮ ಒಪ್ಪಂದಕ್ಕೂ ಎರಡು ದೇಶಗಳು ಅಂತಿಮ ಮುದ್ರೆಯನ್ನೊತ್ತಲಿವೆ ಎಂದು ರಷ್ಯಾದ ಮಾಧ್ಯಮ ವರದಿಗಳು ಹೇಳಿವೆ.

'ಅಡ್ಮಿರಲ್ ಗೋರ್ಷ್‌ಕೋವ್' ಹಸ್ತಾಂತರ ಕುರಿತ ಅಂತಿಮ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ನವದೆಹಲಿಯು 2.35 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಹೆಚ್ಚುವರಿ ಹಣವನ್ನು ತನ್ನ ನೌಕೆಯ ಅಭಿವೃದ್ಧಿ ಮತ್ತು ಭಾರತೀಯ ನೌಕಾದಳದ ಸಿಬ್ಬಂದಿಗಳ ತರಬೇತಿಗಾಗಿ ವ್ಯಯಿಸುವ ಒಪ್ಪಂದಕ್ಕೂ ಸಹಿ ಮಾಡಲಿದೆ.

ದ್ವಿಪಕ್ಷೀಯ ಮಾತುಕತೆಗಾಗಿ ಪ್ರಧಾನಿ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರನ್ನು ಕೂಡ ಪುಟಿನ್ ಮುಖಾಮುಖಿಯಾಗಲಿದ್ದಾರೆ.

ಮೂಲಗಳ ಪ್ರಕಾರ ಈ ಹಿಂದೆ ಸೋವಿಯತ್ ಯುಗದಲ್ಲಿ ರಷ್ಯಾ ಪ್ರಧಾನಿಯಾಗಿದ್ದ ಅಲೆಕ್ಸಿ ಕೋಸಿಜಿನ್ ಅವರಿಗೆ ಇಂದಿರಾ ಗಾಂಧಿಯವರು 1968ರಲ್ಲಿ ಕೋರಿದ್ದ ಸ್ವಾಗತದಂತೆಯೇ ಈ ಬಾರಿ ಪುಟಿನ್ ಅವರನ್ನು ಸಿಂಗ್ ಕೆಂಪು ಹಾಸಿನೊಂದಿಗೆ ಸ್ವಾಗತಿಸಲಿದ್ದಾರೆ. ಇದಕ್ಕಾಗಿ ಅದ್ಧೂರಿ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ