ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೌದ್ಧಧರ್ಮದ ನಿರ್ಮೂಲನಕ್ಕೆ ಚೀನಾ ಯತ್ನ: ದಲೈಲಾಮಾ (Dharamsala | Buddhism | Tibet | Dalai Lama | Chinese)
Bookmark and Share Feedback Print
 
ಚೀನಾ ಟಿಬೆಟ್‌ನ ಬೌದ್ಧವಿಹಾರಗಳಲ್ಲಿ ಸ್ವದೇಶಾಭಿಮಾನದ ಪುನರ್ ಶಿಕ್ಷಣದ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿಯೇ ಬೌದ್ಧ ಧರ್ಮವನ್ನು ನಿರ್ನಾಮ ಮಾಡಲು ಯತ್ನಿಸುತ್ತಿದೆ ಎಂದು ಟಿಬೆಟ್ ಧಾರ್ಮಿಕ ಮುಖಂಡ ದಲೈಲಾಮಾ ಬುಧವಾರದಂದು ಗಂಭೀರವಾಗಿ ಆರೋಪಿಸಿದ್ದಾರೆ.

ಟಿಬೆಟ್‌ನ ಹಲವು ಬೌದ್ಧ ವಿಹಾರಗಳಲ್ಲಿ ಇಂದು ಚೀನಾ ಸ್ವದೇಶಾಭಿಮಾನಿ ಪುನರ್ ಶಿಕ್ಷಣ ಹೆಸರಿನಲ್ಲಿ ವಿವಿಧ ರಾಜಕೀಯ ಪ್ರಚಾರಾಂದೋಲನ ಕೈಗೊಂಡಿದೆ ಎಂದು ದೂರಿದರು. ಬೌದ್ಧ ವಿಹಾರಗಳಲ್ಲಿನ ಬೌದ್ಧಗುರು ಮತ್ತು ಬೌದ್ಧ ಸನ್ಯಾಸಿನಿಯರನ್ನು ಕೈದಿಗಳಂತೆ ಕಾಣಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ತಮ್ಮ ಅಣತಿಯಂತೆಯೇ ಬೌದ್ಧವಿಹಾರಗಳನ್ನು ಪರಿವರ್ತನೆ ಮಾಡಲು ಹೊರಟು ಅದೀಗ ವಸ್ತಸಂಗ್ರಹಾಲಯದಂತೆ ಆಗಿವೆ. ಮತ್ತು ಉದ್ದೇಶಪೂರ್ವಕವಾಗಿಯೇ ಬೌದ್ಧ ಧರ್ಮವನ್ನೇ ನಾಶ ಮಾಡುವ ದುರುದ್ದೇಶವನ್ನು ಚೀನಾ ಹೊಂದಿದೆ ಎಂದು 74ರ ಹರೆಯದ ಲಾಮಾ ಗುಡುಗಿದ್ದಾರೆ.

ಟಿಬೆಟ್ ಸ್ವತಂತ್ರ ಅಧಿಕಾರದ ಕುರಿತಂತೆ ಚೀನಾದ ಅಧಿಕಾರಿಗಳಿಂದ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಇಲ್ಲ ಎಂದು ದಲೈಲಾಮಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ