ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಭಿವ್ಯಕ್ತಿ ಸ್ವಾತಂತ್ರ್ಯ; ಪ್ರವಾದಿ ಕಾರ್ಟೂನ್ ಮರುಮುದ್ರಿಸಿದ ಪತ್ರಿಕೆಗಳು (Swedish papers | Prophet cartoon | Dagens Nyheter | Lars Vilks)
Bookmark and Share Feedback Print
 
ನಾಯಿಯೊಂದರ ದೇಹಕ್ಕೆ ಪ್ರವಾದಿ ಮೊಹಮ್ಮದ್ ಅವರ ತಲೆಯನ್ನು ಸಿಕ್ಕಿಸಿದ ಕಾರ್ಟೂನ್ ಬಿಡಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕಲಾವಿದನನ್ನು ಹತ್ಯೆಗೈಯಲು ಸಂಚು ರೂಪಿಸಿದ ಬೆನ್ನಿಗೆ ಆತನಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸ್ವೀಡನ್‌ನ ಮುಂಚೂಣಿಯ ಪತ್ರಿಕೆಗಳು ವಿವಾದ ಸೃಷ್ಟಿಸಿದ್ದ ಚಿತ್ರವನ್ನು ಮರುಮುದ್ರಿಸಿವೆ.

ಕಲಾವಿದ ಲಾರ್ಸ್ ವಿಲ್ಕ್ಸ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ ಆರೋಪದ ಮೇಲೆ ಐರ್ಲೆಂಡ್‌ನಲ್ಲಿ ಏಳು ಮುಸ್ಲಿಮರನ್ನು ಬಂಧಿಸಿದ ಬಳಿಕ ವಿವಾದಿತ ಕಾರ್ಟೂನ್ ಚಿತ್ರವನ್ನು ಮರು ಮುದ್ರಿಸಿರುವ 'ಡೇಗನ್ಸ್ ನೈಟರ್' ಪತ್ರಿಕೆಯು, 'ಈ ವಿವಾದದಲ್ಲಿ ಲಾರ್ಸ್ ಅವರು ಏಕಾಂಗಿಯಲ್ಲ' ಎಂದು ಸಂದೇಶವನ್ನು ನೀಡಿದೆ.

ಕಲಾವಿದನ ಜೀವಕ್ಕೆ ಇರುವ ಬೆದರಿಕೆಯ ಪರಮಾರ್ಥವೆಂದರೆ ಇದು ಸ್ವೀಡನ್‌ನ ಎಲ್ಲಾ ಜನರ ವಿರುದ್ಧ ಬಂದಿರುವ ಬೆದರಿಕೆ ಎಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ವಿವಾದಿತ ಕಾರ್ಟೂನ್ ಮರುಮುದ್ರಿಸಿರುವುದಕ್ಕೆ ಸಮರ್ಥಿಸಿಕೊಂಡಿದೆ.

ಅಲ್ಲದೆ ಕಲಾವಿದ ವಿಲ್ಕ್ಸ್ ಅವರಿಗೆ ಸಂಪೂರ್ಣ ಭದ್ರತೆ ನೀಡಬೇಕು. ನಮ್ಮ ಮೂಲಭೂತ ಹಕ್ಕುಗಳಲ್ಲೊಂದಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವ ಶಕ್ತಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕೆಗಳು ಆಗ್ರಹಿಸಿವೆ.

ಸ್ವೀಡನ್‌ನ ಮತ್ತೊಂದು ಪತ್ರಿಕೆ 'ನೆರಿಕೆಸ್ ಅಲ್ಲೆಹಂಡಾ' 2007ರ ಆಗಸ್ಟ್ 18ರಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸುವ ಸಲುವಾಗಿ ತನ್ನ ಸಂಪಾದಕೀಯದಲ್ಲಿ ವಿಲ್ಕ್ಸ್ ಅವರ ವಿವಾದಿತ ಕಾರ್ಟೂನನ್ನು ಪ್ರಕಟಿಸಿತ್ತು.

ಆದರೆ ಬುಧವಾರ ಈ ಕಾರ್ಟೂನನ್ನು ಈ ಪತ್ರಿಕೆ ಮರುಮುದ್ರಿಸಿಲ್ಲ. 'ಆ ಚಿತ್ರವನ್ನು ಮತ್ತೆ ಮುದ್ರಿಸುವ ಅಗತ್ಯವಿದೆ, ಅದು ಈಗಲೂ ಸೂಕ್ತ ಎಂದು ನನಗೆ ಅನ್ನಿಸುತ್ತಿಲ್ಲ' ಎಂದು ಅದರ ಪ್ರಧಾನ ಸಂಪಾದಕ ಯುಲ್ಫ್ ಜೋಹಾನ್ಸನ್ ತಿಳಿಸಿದ್ದಾರೆ.

ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾದ ಜತೆ ಸಂಬಂಧ ಹೊಂದಿರುವ ಸಂಘಟನೆಯೊಂದು ಕಲಾವಿದ ವಿಲ್ಕ್ಸ್ ಅವರ ತಲೆಗೆ 1,00,000 ಡಾಲರ್ ಮೊತ್ತವನ್ನು ಘೋಷಿಸಿದ ಹಿನ್ನೆಲೆಯಲ್ಲಿ ಹಲವು ಮಂದಿ ಈಗಾಗಲೇ ಹತ್ಯೆ ಸಂಚು ರೂಪಿಸಿದ್ದಾರೆ. ಅವರಲ್ಲಿ ಏಳು ಮಂದಿಯನ್ನು ಅಮೆರಿಕಾ ಮತ್ತು ಐರೋಪ್ಯ ಭದ್ರತಾ ದಳಗಳ ನೆರವಿನಿಂದ ಬಂಧಿಸಲಾಗಿದೆ.

2009ರ ಅಕ್ಟೋಬರ್‌ನಲ್ಲಿ ಅಮೆರಿಕಾದ ಪೆನ್ಸಿಲ್ವೇನಿಯಾ ನಿವಾಸಿ ಕಾಲಿನ್ ಲಾರೋಸ್ ಎಂಬಾತನನ್ನು ಬಂಧಿಸಲಾಗಿತ್ತು. ಈತ 'ಜಿಹಾದ್ ಜಾನೆ' ಎಂಬ ಆನ್‌ಲೈನ್ ಹೆಸರಿನಲ್ಲಿ ಸ್ವೀಡಿಶ್ ಪ್ರಜೆ-ಕಲಾವಿದನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಲ್ಲದೆ, 'ಸಾವಿನ ಹೊರತು ನನ್ನನ್ನು ಯಾರೂ ತಡೆಯಲಾರರು' ಎಂದು ಪ್ರಮಾಣ ಮಾಡಿಕೊಂಡಿದ್ದ.
ಸಂಬಂಧಿತ ಮಾಹಿತಿ ಹುಡುಕಿ