ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ:ಭಾರತ ಆಯ್ತು, ಈಗ ಕೆನಡಾದ ಯುವಕನಿಗೆ ಹಲ್ಲೆ (Canada | Australia | Indian | Heath Proden | attacks,)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಜನಾಂಗೀಯ ದಾಳಿ ನಡೆದ ನಂತರ ಇದೀಗ ಕೆನಡಾ ಮೂಲದ ವಿಕಲಚೇತನ ವ್ಯಕ್ತಿಯೊಬ್ಬನಿಗೆ ಸಿಡ್ನಿಯಲ್ಲಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

ಕೆನಡಾದ ಹೀತ್ ಪ್ರೊಡೆನ್(35)ಗೆ ಆಸ್ಟ್ರೇಲಿಯಾದ ಅಪ್ರಾಪ್ತ ಯುವಕರಿಬ್ಬರು ವಿನ್ನಿಪೆಗ್‌ ಸಮೀಪ ಹಲ್ಲೆ ನಡೆಸಿದ ಪರಿಣಾಮ ತಲೆಗೆ ಏಟು ಬಿದ್ದಿದೆ. ಆತನನ್ನು ಸಿಡ್ನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಪರೇಶನ್ ನಡೆಸಬೇಕಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಗೆಳೆಯರನ್ನು ಭೇಟಿಯಾಗಿ ಮಂಗಳವಾರ ರಾತ್ರಿ ಪ್ರೊಡೆನ್ ಬರುತ್ತಿದ್ದ ವೇಳೆ 10ರ ಹರೆಯದ ಮಕ್ಕಳ ಗುಂಪು ಈ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ. ಅಂಗವಿಕಲ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಬಗ್ಗೆ ದೂರವಾಣಿ ಮೂಲಕ ಕೇಳಿದಾಗ ತನಗೆ ಆಘಾತವಾಯಿತು ಎಂದು ಪ್ರೊಡೆನ್ ತಾಯಿ ಶೆಲ್ಲಾನ್ ಪ್ರೊಡೆನ್ ಕೆನಡಾದ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಸಿಡ್ನಿಯಲ್ಲಿ ಪ್ರೊಡೆನ್ ರೈಲಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಹಲ್ಲೆ ನಡೆಸಿರುವುದಾಗಿ ಕೆನಡಾದ ಕ್ಯಾನ್‌ವೆಸ್ಟ್ ನ್ಯೂಸ್ ಸಂಸ್ಥೆ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ