ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೈಕೆಲ್ ಜಾಕ್ಸನ್ ಸ್ತ್ರೀಲೋಲ, ಹೆಣ್ಣುಬಾಕ: ಮಾಜಿ ಅಂಗರಕ್ಷಕರು (ladies man | Michael Jackson | womaniser | Mike Garcia)
Bookmark and Share Feedback Print
 
'ಪಾಪ್ ದೊರೆ' ಮೈಕೆಲ್ ಜಾಕ್ಸನ್ ಒಬ್ಬ ಹೆಣ್ಣುಬಾಕ ಮತ್ತು ಸ್ತ್ರೀಲೋಲ ವ್ಯಕ್ತಿ ಎಂದು ಅವರ ಮೂವರು ಮಾಜಿ ಅಂಗರಕ್ಷಕರಾದ ಮೈಕ್ ಗಾರ್ಸಿಯಾ, ಬಿಲ್ ವೈಟ್‌ಫೀಲ್ಡ್ ಮತ್ತು ಜಾವನ್ ಬಿಜೆ ಬಿಯರ್ಡ್ 'ಗುಡ್ ಮಾರ್ನಿಂಗ್ ಅಮೆರಿಕಾ' ಟಿವಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ನಿಧನರಾಗಿದ್ದ ಜಾಕ್ಸನ್ ಲೈಂಗಿಕ ಜೀವನದ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತೀವ್ರ ಸಂಶಯಪಡಲಾಗುತ್ತಿತ್ತು. ಆದರೆ ಅವರ ಆಪ್ತ ಅಂಗರಕ್ಷಕರ ಪ್ರಕಾರ ಜಾಕ್ಸನ್ ಇತರ ಪುರುಷರಂತೆ ಅನ್ಯ ಲಿಂಗದವರ ಮೇಲೆ ಸಾಮಾನ್ಯ ಮೋಹ ಹೊಂದಿದ್ದ ವ್ಯಕ್ತಿಯಾಗಿದ್ದರು.

ಒಬ್ಬ ವ್ಯಕ್ತಿಯಾಗಿ, ಪುರುಷರ ಬಗ್ಗೆ ಪುರುಷರಿಗೆ ತಿಳಿದಿರುತ್ತದೆ. ಅವರು ಒಬ್ಬ ಗಂಡಸು ಎಂದು ತಿಳಿದುಕೊಳ್ಳುವಷ್ಟು ಸುದೀರ್ಘ ಕಾಲ ನಾವು ಅವರೊಂದಿಗಿದ್ದೆವು ಎಂದು ವೈಟ್‌ಫೀಲ್ಡ್ ಹೇಳಿದ್ದಾರೆ.

ನಮಗಿದ್ದಂತೆ ಮಹಿಳೆಯರ ಬಗ್ಗೆ ಅವರಿಗೂ ಮೋಹಗಳಿದ್ದವು. ಅವರಿಗೆ ಪ್ರೇಯಸಿಯರಿದ್ದರು. ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅವರು ಹಿಂದಿನ ಸೀಟಿನಲ್ಲಿದ್ದಾಗ ಅವರ ಮತ್ತು ನಮ್ಮ ನಡುವೆ ಒಂದು ಪರದೆ ಇರುತ್ತಿತ್ತು. ಹಾಗಾಗಿ ಹಿಂದಿನ ಸೀಟಿನಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಸಾಧ್ಯವಿರಲಿಲ್ಲ. ಅವರು ಮಾತುಕತೆ ನಡೆಸುತ್ತಿರುವುದು ಕೇಳಿಸುತ್ತಿತ್ತು. ಆದರೆ ಅವರು ತಮ್ಮ ಮೇರೆ ಮೀರಿರಲಿಲ್ಲ. ಆದರೆ ಪರಸ್ಪರ ಚುಂಬಿಸುತ್ತಿರುವ ಶಬ್ದ ನಮಗೆ ಕೇಳಿಸುತ್ತಿತ್ತು ಎಂದು ಗಾರ್ಸಿಯಾ ವಿವರಣೆ ನೀಡಿದ್ದಾರೆ.

ಈ ತ್ರಿಮೂರ್ತಿಗಳು ಶ್ರೇಷ್ಠ ಸಂಗೀತಗಾರ-ಹಾಡುಗಾರನ ವೈಯಕ್ತಿಕ ಜೀವನದ ಬಯಲಾಗದ ಹಲವು ಪುಟಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದು, ಜಾಕ್ಸನ್ ಕನಿಷ್ಠ ಇಬ್ಬರು ಸ್ಥಿರ ಗರ್ಲ್ ಫ್ರೆಂಡ್‌ಗಳನ್ನು ಹೊಂದಿದ್ದರು; ಅವರಿಬ್ಬರ ಹೆಸರುಗಳನ್ನು ಕೂಡ ಗುಪ್ತವಾಗಿರಿಸಲಾಗಿತ್ತು. ಅವರನ್ನು ಸ್ವತಃ ಜಾಕ್ಸನ್ ಬೇಕಾದಾಗ ಕರೆದುಕೊಂಡು ಬಂದು ನಂತರ ಲಾಸ್‌ವೇಗಾಸ್‌ನಲ್ಲಿ ಬಿಟ್ಟು ಬರುತ್ತಿದ್ದರು ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಜಾಕ್ಸನ್ ನಿರಪರಾಧಿಯೆಂದು ನ್ಯಾಯಾಲಯ ಪ್ರಕಟಿಸಿದ್ದರೂ, ನಿಜಾಂಶ ಏನಾಗಿತ್ತು ಎಂದು ಇವರಲ್ಲಿ ಪ್ರಶ್ನಿಸಿದಾಗ, 'ಆ ಆರೋಪಗಳಲ್ಲಿ ಹುರುಳಿರಲಿಲ್ಲ' ಎಂದಷ್ಟೇ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ