ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾದೇಶದಲ್ಲಿ ಅಪ್ರಾಪ್ತರಿಗೆ ಮೊಬೈಲ್ ಸಿಮ್ ನಿಷೇಧ (cellphone | Bangladesh | mobile phone | Sheikh Hasina)
Bookmark and Share Feedback Print
 
18 ವರ್ಷದೊಳಗಿನವರಿಗೆ ಸೆಲ್‌ಫೋನ್ ಕಾರ್ಡ್‌ಗಳನ್ನು ನೀಡುವಂತಿಲ್ಲ, ಅವರು ಸಿಮ್‌ಗಳನ್ನು ಖರೀದಿಸುವಂತಿಲ್ಲ ಎಂದು ಬಾಂಗ್ಲಾದೇಶ ಸರಕಾರ ಜಾರಿಗೆ ತರುತ್ತಿರುವ ನೂತನ ಕಾನೂನಿನಲ್ಲಿ ಹೇಳಲಾಗಿದೆ.

ಸುಲಿಗೆ, ಬೆದರಿಕೆ ಮತ್ತು ಕಿರುಕುಳ ಮುಂತಾದ ಹಲವು ಕ್ರಿಮಿನಲ್ ಆಪಾದನೆಗಳ ಹಿನ್ನೆಲೆಯಲ್ಲಿ ಇದುವರೆಗೆ ಸುಮಾರು ಎರಡು ಲಕ್ಷ ಮೊಬೈಲ್ ಫೋನ್ ಸಂಪರ್ಕಗಳನ್ನು ರದ್ದು ಮಾಡಲಾಗಿದೆ ಎಂದು ಬುಧವಾರ ಗೃಹ ಸಚಿವೆ ಸಹರಾ ಖುತಾನ್ ತಿಳಿಸಿದ್ದಾರೆ.

ದೇಶದಾದ್ಯಂತ ಸುಮಾರು 12 ಲಕ್ಷ ನೋಂದಣಿಯಾಗದ ಸಿಮ್ ಮತ್ತು ರಿಮ್‌ಗಳಿದ್ದು, ಅವುಗಳನ್ನು ರದ್ದು ಮಾಡಲಾಗುತ್ತಿದೆ. ಇವುಗಳು ದೇಶ ವಿರೋಧಿ ಕೃತ್ಯಗಳಿಗೆ ಬಳಕೆಯಾಗುತ್ತಿದ್ದು, ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಪ್ರಧಾನ ಮಂತ್ರಿ ಶೇಖ್ ಹಸೀನಾ ಮತ್ತು ಅವರ ಅಳಿಯ ಹಾಗೂ ಸಂಸದರಾಗಿರುವ ಫಾಜ್ಲ್ ನೂರ್ ತಾಪೋಶ್ ಅವರೂ ಇತ್ತೀಚೆಗೆ ಬೆದರಿಕೆ ಎಸ್ಎಂಎಸ್ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ 'ದಿ ಡೈಲೀ ಸ್ಟಾರ್' ವರದಿ ಮಾಡಿದೆ.

18 ವರ್ಷಗಳನ್ನು ದಾಟಿದವರು ಸಿಮ್ ಖರೀದಿಸಲು ಅರ್ಜಿ ತುಂಬಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ತಮ್ಮ ರಾಷ್ಟ್ರೀಯ ಗುರುತು ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಈ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಧಿಕೃತ ಪರವಾನಗಿ ಪಡೆದುಕೊಳ್ಳುವ ವಿಧಾನಕ್ಕೂ ಸಾಕಷ್ಟು ನಿಬಂಧನೆಗಳನ್ನು ವಿಧಿಸಲಾಗಿದೆ. ಹೀಗೆ ತಮಗೆ ಸಿಮ್ ಮಾರಾಟ ಪರವಾನಗಿ ಬೇಕೆಂದು ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 12ನೇ ತರಗತಿ ವಿದ್ಯಾಭ್ಯಾಸ ಮಾಡಿರಬೇಕು ಮತ್ತು ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಂಡಿರಬೇಕು ಮುಂತಾದ ಕಠಿಣ ನಿಯಮಗಳನ್ನು ಪರಿಚಯಿಸಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಪ್ರಸಕ್ತ ಅಂದರೆ 2010ರ ಜನವರಿ ತಿಂಗಳಾಂತ್ಯದವರೆಗೆ 56 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ