ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಾಂತಿ ಮಾತುಕತೆ-ಪಾಕ್ ಮಧ್ಯಸ್ಥಿಕೆ ಸ್ವಾಗತ: ಅಫ್ಘಾನಿಸ್ತಾನ (Afghanistan | Pakistan | Hamid Karzai |Taliban | peace talk)
Bookmark and Share Feedback Print
 
ತಾಲಿಬಾನ್ ಜೊತೆ ಶಾಂತಿ ಮಾತುಕತೆ ನಡೆಸುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಫ್ಘಾನಿಸ್ತಾನ ಅಧ್ಯಕ್ಷ ಹಮೀಜ್ ಕರ್ಜಾಯ್ ಗುರುವಾರ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರ ಜೊತೆ ಶಾಂತಿ ಮಾತುಕತೆ ನಡೆಸಲು ಪ್ರಮುಖ ಪಾತ್ರ ವಹಿಸುವುದಾಗಿ ಪಾಕಿಸ್ತಾನ ಕೋರಿತ್ತು. ಆ ನಿಟ್ಟಿನಲ್ಲಿ ತಾಲಿಬಾನ್ ಜೊತೆಯ ಶಾಂತಿ ಮಾತುಕತೆಯಲ್ಲಿ ಪಾಕ್ ಮಧ್ಯಸ್ಥಿಕೆ ವಹಿಸುವುದಾದರೆ ತುಂಬಾ ಉತ್ತಮ ಎಂದು ಹಮೀದ್ ಪ್ರತಿಕ್ರಿಯಿಸಿದ್ದಾರೆ.

ಅಫ್ಘಾನಿಸ್ತಾನವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿರುವ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರನ್ನು ತಾನು ಅಭಿನಂದಿಸುವುದಾಗಿ ಕರ್ಜಾಯ್ ಈ ಸಂದರ್ಭದಲ್ಲಿ ಹೇಳಿದರು. ಹಾಗಾಗಿ ಪಾಕಿಸ್ತಾನ ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿಕೊಳ್ಳುವುದನ್ನು ಸ್ವಾಗತಿಸುತ್ತದೆ ಎಂದರು.

ಏತನ್ಮಧ್ಯೆ ಪಾಕಿಸ್ತಾನದ ಕರಾಚಿಯ ದಕ್ಷಿಣ ನಗರದಲ್ಲಿ ತಾಲಿಬಾನ್ ಸಂಘಟನೆಯ ನಂ.2ಮುಖಂಡನಾಗಿರುವ ಮುಲ್ಲಾ ಅಬ್ದುಲ್ ಗನಿ ಬ್ರಾಡಾರ್‌ನನ್ನು ಸೆರೆ ಹಿಡಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ತಾಲಿಬಾನ್ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ದಾಳಿಯನ್ನು ಕೈಗೊಂಡಿದ್ದು, ಅಫ್ಘಾನ್ ಸರ್ಕಾರದ ಶಾಂತಿ ಮಾತುಕತೆ ಪ್ರಕ್ರಿಯೆ ಇಲ್ಲ ಎಂದು ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ