ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಆಪ್ತಮಿತ್ರ, ಪಾಕಿಸ್ತಾನ ಸಯಾಮಿ ಅವಳಿ: ಅಫ್ಘಾನ್ (India | Afghanistan | Hamid Karzai | Pakistan)
Bookmark and Share Feedback Print
 
ಭಾರತವನ್ನು ಆಪ್ತಮಿತ್ರ ಎಂದು ಗುರುವಾರ ಬಣ್ಣಿಸಿರುವ ಅಫಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ, ತನ್ನ ಮಾತನ್ನು ತೂಕಕ್ಕೆ ಹಾಕುತ್ತಾ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳು ಸಯಾಮಿ ಅವಳಿಗಳು ಎಂದು ತಿಳಿಸಿದ್ದಾರೆ.

'ತನ್ನ ನೆಲದಿಂದ ಪಕ್ಕದ ಯಾವುದೇ ರಾಷ್ಟ್ರಗಳ ವಿರುದ್ಧ ಭಯೋತ್ಪಾದನಾ ಪಿತೂರಿ ರೂಪಿಸಲು ಅವಕಾಶ ನೀಡುವುದಿಲ್ಲ' ಎಂದು ಕರ್ಜೈ ಹೇಳಿದ್ದು, ಅಫಘಾನಿಸ್ತಾನದಲ್ಲಿ ಭಾರತದ ಕೈವಾಡದ ಬಗ್ಗೆ ಆಗಾಗ ಕಳವಳ ವ್ಯಕ್ತಪಡಿಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಕರ್ಜೈ ಅವರ ಹೇಳಿಕೆ ಸಮಾಧಾನ ತರಬಹುದು ಎಂದು ಹೇಳಲಾಗಿದೆ.

ಭಾರತವು ಅಫಘಾನಿಸ್ತಾನದ ಆಪ್ತ ಗೆಳೆಯ. ಆದರೆ ಪಾಕಿಸ್ತಾನವು ಅಫಘಾನಿಸ್ತಾನದ ಅವಳಿ ಸಹೋದರ. ನಾವು ಅವಳಿಗಿಂತಲೂ ಕೊಂಚ ಮೇಲಿನವರು. ನಾವು ಬೇರ್ಪಡಿಸಲಾಗದ ಅವಳಿಗಳು. ಇಲ್ಲಿ ಯಾವುದೇ ಪ್ರತ್ಯೇಕತೆಯಿಲ್ಲ, ಪ್ರತ್ಯೇಕತೆ ನಡೆಯುವುದೂ ಇಲ್ಲ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿಯವರೊಂದಿಗೆ ನಡೆಸಿದ ಜಂಟಿ ಪತ್ರಿಕಾ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕರ್ಜೇ ವಿವರಣೆ ನೀಡಿದರು.

ಭಾರತ ಮತ್ತು ಅಫಘಾನಿಸ್ತಾನಗಳು ನಿಕಟ ಸಂಬಂಧಗಳನ್ನು ಹೊಂದಿವೆ ಎಂಬುದನ್ನು ಪಾಕಿಸ್ತಾನಕ್ಕೆ ಎರಡು ದಿನಗಳ ಪ್ರವಾಸಕ್ಕೆಂದು ಬಂದಿರುವ ಕರ್ಜೈ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಎರಡು ದೇಶಗಳ ನಡುವಿನ ಸಹಕಾರಿ ಸಂಬಂಧಗಳ ಕುರಿತು ಗಿಲಾನಿಯವರಿಗೆ ಮಾಹಿತಿ ನೀಡುತ್ತಾ ಕರ್ಜೈಯವರು, 'ಭಾರತವು ಅಫಘಾನಿಸ್ತಾನದ ಮರು ನಿರ್ಮಾಣಕ್ಕೆ ಸಹಾಯ ಮಾಡಲು ಮುಂದೆ ಬಂದಿದೆ. ಅಲ್ಲದೆ ಅಫ್ಘಾನ್ ಯುವಕರಿಗೆ ಭಾರತದಲ್ಲಿ ಶಿಕ್ಷಣ ಒದಗಿಸುವ ಆಹ್ವಾನವನ್ನೂ ನೀಡಿದೆ' ಎಂದರು.

ಅಫಘಾನಿಸ್ತಾನದಲ್ಲಿ ಭಾರತದ ಭಾಗೀದಾರಿಕೆಯ ಕುರಿತು ಗಿಲಾನಿ ಮತ್ತು ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಸೇರಿದಂತೆ ಪಾಕಿಸ್ತಾನದ ಅಗ್ರ ನಾಯಕತ್ವ ಆಗಾಗ ತನ್ನ ಕಳವಳವನ್ನು ವ್ಯಕ್ತಪಡಿಸುತ್ತಾ ಬಂದಿದೆ.

ಅಲ್ಲದೆ ಅಫಘಾನಿಸ್ತಾನದಿಂದ ಭಯೋತ್ಪಾದನಾ ದಾಳಿಗಳನ್ನು ಪಾಕಿಸ್ತಾನಕ್ಕೆ ನಡೆಸುವ ಕುರಿತು ಭಾರತವು ಪಿತೂರಿ ನಡೆಸುತ್ತಿದೆ ಎಂದೂ ಆಂತರಿಕ ಸಚಿವ ರೆಹಮಾನ್ ಮಲಿಕ್ ಆರೋಪಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ