ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಷ್ಕರ್-ಐಎಸ್ಐ ಸಂಬಂಧ ಎಗ್ಗಿಲ್ಲದೆ ಮುಂದುವರಿಯುತ್ತಿದೆ: ಅಮೆರಿಕಾ (ISI | Lashkar-e-Taiba | Pakistan | terrorist outfit)
Bookmark and Share Feedback Print
 
ಮುಂಬೈ ದಾಳಿಯ ಹೊಣೆ ಹೊತ್ತುಕೊಂಡಿರುವ ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆಗೆ ಐಎಸ್ಐ ತನ್ನ ಸಂಬಂಧವನ್ನು ಮುಂದುವರಿಸಿದ್ದು, ಇಸ್ಲಾಮಾಬಾದ್ ಉಗ್ರ ಸಂಘಟನೆಯ ನಾಯಕರು ಮತ್ತು ಅದರ ಜಾಲದ ವಿರುದ್ಧ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಹೊಂದಿಲ್ಲ ಎಂದು ಅಮೆರಿಕಾ ಹಾಗೂ ದಕ್ಷಿಣ ಏಷಿಯಾದ ಹಲವು ಪರಿಣತರು ಅಮೆರಿಕಾದ ಶಾಸಕಾಂಗ ಸದಸ್ಯರಿಗೆ ತಿಳಿಸಿದ್ದಾರೆ.

'ಲಷ್ಕರ್ ಇ ತೋಯ್ಬಾ ಮತ್ತು ಪಾಕಿಸ್ತಾನದಲ್ಲಿ ವೃದ್ಧಿಗೊಳ್ಳುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆ' ಕುರಿತು ಗುರುವಾರ ಏರ್ಪಡಿಸಲಾಗಿದ್ದ ವಿಶೇಷ ಶಾಸನಸಬೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಈ ಆರೋಪವನ್ನು ಮಾಡಿದ್ದು, ಒಬಾಮಾ ಆಡಳಿತವು ಶತಯತ್ನ ನಡೆಸಿದ ಹೊರತಾಗಿಯೂ ಲಷ್ಕರ್ ಇ ತೋಯ್ಬಾದ ಜತೆ ಐಎಸ್ಐ ತನ್ನ ಸಂಬಂಧವನ್ನು ಮುಂದುವರಿಸಿದೆ ಮತ್ತು ಪಾಕಿಸ್ತಾನವು ಈ ಭಯೋತ್ಪಾದನಾ ಸಂಘಟನೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಲಷ್ಕರ್ ಇ ತೋಯ್ಬಾ ಎನ್ನುವುದು ಧರ್ಮಾಂಧರ ಮಾರಣಾಂತಿಕ ಸಂಘಟನೆ. ಪಾಕಿಸ್ತಾನದ ಮಿಲಿಯರಿ ಜತೆ ಸಂಬಂಧ ಹೊಂದಿರುವ ಮತ್ತು ಅದರಿಂದ ರಕ್ಷಣೆ ಪಡೆಯುತ್ತಿರುವ ಈ ಕುಕೃತ್ಯಗಳನ್ನು ನಡೆಸುವ ಮಹತ್ವಾಕಾಂಕ್ಷೆ ಹೊಂದಿರುವ ಸಂಘಟನೆಗೆ ಸಾಕಷ್ಟು ಆರ್ಥಿಕ ಸಹಕಾರ ಹರಿದು ಬರುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಬಂಧಗಳ ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷಿಯಾಗಳ ಸಮಿತಿಯ ಉಪಸಮಿತಿಯ ಅಧ್ಯಕ್ಷರಾಗಿರುವ ಗ್ಯಾರಿ ಎಲ್ ಆಕರ್ಮನ್ ಅಭಿಪ್ರಾಯಪಟ್ಟರು.

ಅದೇ ಪಾಕಿಸ್ತಾನದ ಮಿಲಿಟರಿಗೆ ಒಬಾಮಾ ಆಡಳಿತವು ಆತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ ಎಂಬುದನ್ನೂ ಅವರು ಇದೇ ಸಂದರ್ಭದಲ್ಲಿ ಬೆಟ್ಟು ಮಾಡಿ ತೋರಿಸಿದ್ದಾರೆ.

ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಹಫೀಜ್ ಮೊಹಮ್ಮದ್ ಸಯೀದ್ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಸ್ವತಂತ್ರವಾಗಿ ಬಿಟ್ಟಿರುವ ಪಾಕಿಸ್ತಾನದ ಕ್ರಮವನ್ನೂ ಶಾಸಕಾಂಗದ ಸದಸ್ಯರು ಚರ್ಚಿಸಿದರು.

ಅಲ್ಲದೆ ಲಷ್ಕರ್ ಇ ತೋಯ್ಬಾದಿಂದ ಮತ್ತೊಂದು ಮುಂಬೈಯಂತಹ ದಾಳಿ ನಡೆದಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಯುದ್ಧದಂತಹ ಮಾರಕ ನಿರ್ಧಾರಗಳಿಗೆ ಬರಬಹುದು ಎಂದು ಉದ್ದೇಶವನ್ನಿಟ್ಟುಕೊಂಡು ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಆದರೂ ಇವುಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಅಭಿಪ್ರಾಯಪಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ