ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಢಾಕಾ: ಭ್ರಷ್ಟಾಚಾರ-ಹಸೀನಾ ವಿರುದ್ಧದ ಪ್ರಕರಣ ವಜಾ (High Court | Bangladesh | Sheikh Hasina | corruption case)
Bookmark and Share Feedback Print
 
ಸುಮಾರು 2ಬಿಲಿಯನ್ ಡಾಲರ್ ಭ್ರಷ್ಟಾಚಾರದ ಆರೋಪದ ಎದುರಿಸುತ್ತಿದ್ದ ಪ್ರಧಾನಿ ಶೇಕ್ ಹಸೀನಾ ವಿರುದ್ಧದ ಪ್ರಕರಣವನ್ನು ಬಾಂಗ್ಲಾದೇಶ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಪ್ರಕರಣದ ಕುರಿತಂತೆ ನಿನ್ನೆ ಅಂತಿಮ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, 2007ರಲ್ಲಿ ಪ್ರಥಮ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದ್ದ ಸಂದರ್ಭದಲ್ಲಿ ಕೆನಡಾ ಮೂಲದ ನಿಕೋ ರಿಸೋರ್ಸ್ಸ್ ಕಂಪನಿ ಕರಾವಳಿ ಪ್ರದೇಶದಲ್ಲಿ ಅನಿಲ ಸ್ಥಾವರ ನಿರ್ಮಿಸಲು ಮಾಡಿಕೊಂಡ ಒಪ್ಪಂದದಲ್ಲಿ ಭಾರೀ ಮೊತ್ತದ ಭ್ರಷ್ಟಚಾರ ಎಸಗಲಾಗಿತ್ತು ಎಂದು ಆರೋಪಿಸಲಾಗಿತ್ತು ಎಂದು ಸ್ಟಾರ್ ಆನ್‌ಲೈನ್ ವರದಿ ತಿಳಿಸಿದೆ.

ಶೇಕ್ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಆರೋಪ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದ ನ್ಯಾಯಾಲಯ, ಇದೊಂದು ರಾಜಕೀಯ ಪ್ರೇರಿತವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದೆ. ಆ ನಿಟ್ಟಿನಲ್ಲಿ ಹಸೀನಾ ವಿರುದ್ಧ ಆರೋಪಿಸಿ ದಾಖಲಿಸಿದ್ದ ಮೂರು ಭ್ರಷ್ಟಾಚಾರ ಪ್ರಕರಣವನ್ನು ವಜಾಗೊಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ