ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಾಲೆಯಲ್ಲಿ ಬುರ್ಖಾ ಧರಿಸಬಹುದು; ಶಿಕ್ಷಕಿಗೆ ಬೆಲ್ಜಿಯಂ ಕೋರ್ಟ್ (Belgium | veil | Muslim mathematics teacher | Charleroi city)
Bookmark and Share Feedback Print
 
ತರಗತಿಯಲ್ಲಿ ಬುರ್ಖಾ ಹಾಕಿಕೊಳ್ಳಬಾರದು ಎಂದು ಬೆಲ್ಜಿಯಂನ ಕೆಳಗಿನ ನ್ಯಾಯಾಯಲದ ತೀರ್ಪಿನ ವಿರುದ್ಧ ಹೋರಾಟಕ್ಕಿಳಿದಿದ್ದ ಮುಸ್ಲಿಂ ಗಣಿತ ಶಿಕ್ಷಕಿಯೊಬ್ಬರಿಗೆ ಕೊನೆಗೂ ಜಯ ಸಿಕ್ಕಿದೆ. ತರಗತಿಯಲ್ಲಿ ಬುರ್ಖಾ ಧರಿಸಬಹುದು ಎಂದು ಗುರುವಾರ ನ್ಯಾಯಾಲಯ ತೀರ್ಪು ನೀಡಿದೆ.

ಹೆಸರು ಹೇಳಲಿಚ್ಛಿಸದ ಈ ಮುಸ್ಲಿಂ ಶಿಕ್ಷಕಿ ಈ ಹಿಂದೆ ಎರಡು ವರ್ಷಗಳಿಂದ ಬುರ್ಖಾ (ಮುಖ ಪರದೆ) ಧರಿಸುತ್ತಿದ್ದ ಹೊರತಾಗಿಯೂ ಕಳೆದ ವರ್ಷದ ಸೆಪ್ಟೆಂಬರ್ ನಂತರ ಬುರ್ಖಾ ಧರಿಸಬಾರದೆಂದು ಶಾಲೆಯ ಅಧಿಕಾರಿಗಳು ನಿಷೇಧ ಹೇರಿದ್ದವು ಎಂದು ವರದಿಗಳು ಹೇಳಿವೆ.

ಫ್ರೆಂಚ್ ಭಾಷಿಗರ ಕೈಗಾರಿಕಾ ನಗರ ಚಾರ್ಲೆರೋಯ್ ಎಂಬಲ್ಲಿನ ಶಾಲೆಯಲ್ಲಿ ಬುರ್ಖಾದ ಮೇಲೆ ಹೇರಿರುವ ನಿಷೇಧದ ವಿರುದ್ಧ ಆರಂಭದಲ್ಲಿ ಕೆಳಗಿನ ಕೋರ್ಟಿನಲ್ಲಿ ನಡೆಸಿದ್ದ ಹೋರಾಟ ವಿಫಲವಾಗಿತ್ತು. ರಾಷ್ಟ್ರೀಯ ಪ್ರಾಥಮಿಕ ಭಾಷಾ ಶಾಲಾ ವ್ಯವಸ್ಥೆಯ ಆದೇಶವನ್ನು ಉದಾಹರಿಸಿದ್ದ ನ್ಯಾಯಾಲಯ ಈ ತೀರ್ಪಿನ ಮೂಲಕ ಶಿಕ್ಷಕಿಗೆ ನಿರಾಸೆಯನ್ನುಂಟು ಮಾಡಿತ್ತು.

ಆದರೆ ಮೋನ್ಸ್‌ನಲ್ಲಿನ ನ್ಯಾಯಾಲಯದಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಶಿಕ್ಷಕಿ, ಶಾಲೆಗೆ ಚಾರ್ಲೆರೋಯ್ ಪುರಭವನವು ಧನಸಹಾಯ ಮಾಡುತ್ತಿದೆಯೇ ಹೊರತು, ರಾಷ್ಟ್ರೀಯ ಶಾಲಾ ವ್ಯವಸ್ಥೆಯಲ್ಲ. ಹಾಗಾಗಿ ಈ ಹಿಂದಿನ ಆದೇಶವು ಇದಕ್ಕೆ ಅನ್ವಯವಾಗುವುದಿಲ್ಲ ಎಂದು ವಾದಿಸಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ತತ್ವಗಳನ್ನು ಅಳವಡಿಸಿಕೊಳ್ಳಲು ನಿಖರತೆಯು ಅಗತ್ಯವಾಗಿದ್ದು, ಇದನ್ನು ಚಾರ್ಲೆರಾಯ್ ನಗರವು ನಡೆಸಿಲ್ಲ ಎಂಬುದನ್ನು ನ್ಯಾಯಾಲಯ ಹೇಳಿತು ಎಂದು ಶಿಕ್ಷಕಿಯ ವಕೀಲ ಜೀನ್ ಕ್ಲೌಡ್ ಜೆರ್ಜೆಲ್ ತಿಳಿಸಿದ್ದಾರೆ.

ಈ ಸಂಬಂಧ ತೀರ್ಪು ನೀಡಿರುವ ನ್ಯಾಯಾಲಯವು, ತಮ್ಮ ಧಾರ್ಮಿಕ ಸಂಕೇತಗಳಾದ ಬುರ್ಖಾ ಅಥವಾ ಇನ್ನಿತರ ಯಾವುದೇ ಬಟ್ಟೆಗಳನ್ನು ಶಿಕ್ಷಕರು ಧರಿಸಬಹುದಾಗಿದೆ. ಇದಕ್ಕೆ ನಿಷೇಧ ಹೇರುವಂತಿಲ್ಲ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ