ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷ್ ಹತ್ಯಾ ಯತ್ನ ಪ್ರಕರಣ: ಆರೋಪಿಗಳಿಬ್ಬರ ಖುಲಾಸೆ (Lashkar-e-Jhangvi | Musharraf | Pakistan | Lahore High Court)
Bookmark and Share Feedback Print
 
2003ರಲ್ಲಿ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಆರೋಪ ಎದುರಿಸುತ್ತಿದ್ದ ಲಷ್ಕರ್ ಇ ಜಾಂಗ್ವಿ(ಎಲ್‌ಇಜೆ)ಯ ಇಬ್ಬರನ್ನು ಪಾಕಿಸ್ತಾನ ಕೋರ್ಟ್ ಗುರುವಾರ ಖುಲಾಸೆಗೊಳಿಸಿದೆ.

ಮುಷರ್ರಫ್ ಅವರನ್ನು ಹತ್ಯೆಗೈಯುವ ಉದ್ದೇಶದಿಂದ ಸೇತುವೆ ಕೆಳಗೆ ಬಾಂಬ್‌ವೊಂದನ್ನು ಫಿಕ್ಸ್ ಮಾಡಿ ಇಡಲಾಗಿತ್ತು. ಆದರೆ ಅದೃಷ್ಟವಶಾತ್ ಮುಷ್ ಅವರ ಕಾರು ಸೇತುವೆಯಿಂದ ಹೊರಹೋದ 30ಸೆಕೆಂಡ್‌ಗಳಲ್ಲಿಯೇ ಸ್ಫೋಟ ಸಂಭವಿಸುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಮುಷ್ ಹತ್ಯಾ ಯತ್ನದ ಆರೋಪದ ಮೇಲೆ 2008ರಲ್ಲಿ ಲಾಹೋರ್‌ನಲ್ಲಿ ಅಸಿಫ್ ಸೋಹೈಲ್ ಅಲಿಯಾಸ್ ಮೂಸಾ ಮತ್ತು ಅಬುರ್ ರೆಹಮಾನ್‌ನನ್ನು ಬಂಧಿಸಲಾಗಿತ್ತು. ನಂತರ ಪ್ರಕರಣದ ತನಿಖೆ ನಡೆಸಿದ ವಿಚಾರಣಾ ನ್ಯಾಯಾಲಯ ಕಳೆದ ವರ್ಷ 14ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಆದರೆ ವಿಚಾರಣಾಧೀನ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಇಬ್ಬರು ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೆಳನ್ಯಾಯಾಲಯದ ತೀರ್ಪನ್ನು ವಜಾಗೊಳಿಸಿ, ಅವರಿಬ್ಬರನ್ನೂ ಖುಲಾಸೆಗೊಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ