ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಿಲಿ: ಪ್ರಥಮ ಬಲಪಂಥೀಯ ಅಧ್ಯಕ್ಷರಾಗಿ ಪಿರೇರಾ ಪ್ರಮಾಣವಚನ (earthquake | Chile | Sebastian Pinera | right-wing president)
Bookmark and Share Feedback Print
 
ಭೂಕಂಪದ ಮೇಲೆ ಭೂಕಂಪ ಸಂಭವಿಸಿ ತತ್ತರಿಸಿ ಹೋಗಿದ್ದ ಚಿಲಿಯಲ್ಲಿನ ಘೋರ ದುರಂತದ ನಡುವೆಯೂ ಮೊದಲ ಬಾರಿಗೆ ಬಲಪಂಥೀಯ ಸೆಬಾಸ್ಟೀಯನ್ ಪಿರೇರಾ ಅವರು ನೂತನ ಅಧ್ಯಕ್ಷರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಪ್ರಬಲ ಭೂಕಂಪನದಿಂದ ಚಿಲಿ ಸಂಪೂರ್ಣವಾಗಿ ತತ್ತರಿಸಿ ಹೋಗಿತ್ತು. ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಅವರೆಲ್ಲರಿಗೂ ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಲಿ ಸರ್ಕಾರ ಹರಸಾಹಸ ಪಡುತ್ತಿದ್ದೆ. ಇಂತಹ ಸಂದರ್ಭದಲ್ಲಿ ಪಿರೇರಾ ದೇಶದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೋಸ್ಟಲ್ ವಾಲ್‌ಪಾರೈಸೋದಲ್ಲಿನ ಕಾಂಗ್ರೆಸ್ಸನಲ್ ಹಾಲ್‌ನ ಬಾಲ್ಕನಿಯಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಜಗಮಗಿಸುವ ಬೆಳಕಿನ ನಡುವೆ ಆಗಮಿಸುತ್ತಿದ್ದ ಅಧ್ಯಕ್ಷರಿಗೆ ಜನರು ಜಯಕಾರ ಹಾಕುತ್ತಿದ್ದರೆ, ಪಿರೇರಾ ತುಂಬಾ ವಿಚಲಿತರಾದಂತೆ ಕಂಡು ಬಂದ ಅವರು ನಂತರ ಸುಧಾರಿಸಿಕೊಂಡು ಜನರತ್ತ ಕಿರು ನಗೆಯನ್ನು ಬೀರಿದರು.

ಸುಮಾರು 2ಸಾವಿರ ಜನರು ನೆರೆದಿದ್ದ ಸಮಾರಂಭದಲ್ಲಿ ಅಧ್ಯಕ್ಷರು ಮತ್ತು ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಸುಮಾರು 52ವರ್ಷಗಳ ಬಳಿಕ ಚಿಲಿ ಪ್ರಥಮ ಬಾರಿಗೆ ಬಲಪಂಥೀಯ ಅಧ್ಯಕ್ಷರೊಬ್ಬರ ಆಡಳಿತ ಕಾಣಲು ಸಜ್ಜಾಗಿದೆ. ತಾನು ದೇಶದ ಆರ್ಥಿಕ ಸ್ಥಿತಿಯ ಸುಧಾರಣೆ ಹಾಗೂ ಜನರ ಕಣ್ಣೀರೊರೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಈ ಸಂದರ್ಭದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡುತ್ತ ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ