ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಿಂದ ಕ್ಷಿಪಣಿ ಉಡ್ಡಯನ: ಭಾರತಕ್ಕೆ ಎಚ್ಚರಿಕೆ! (Pakistan | India | Islamabad | Zardari | Gilani)
Bookmark and Share Feedback Print
 
ಪಾಕಿಸ್ತಾನದ ನೌಕಾದಳ ಯುದ್ಧ ಹಡಗು, ಸಬ್ ಮೆರಿನ್ ಮೂಲಕ ಕ್ಷಿಪಣಿ, ಸಿಡಿತಲೆಗಳನ್ನು ಪರೀಕ್ಷಾರ್ಥವಾಗಿ ಹಾರಿ ಬಿಡುವ ಮೂಲಕ ತನ್ನ ಬಲವೃದ್ಧಿಸಿಕೊಂಡಿದ್ದು, ಭಾರತದ ರಕ್ಷಣಾ ವ್ಯವಸ್ಥೆಗೆ ತಾವು ಪ್ರತಿಸ್ಪರ್ಧಿಗಳು ಎಂಬುದನ್ನು ಪರೋಕ್ಷವಾಗಿ ತೋರಿಸಿದೆ.

ಉತ್ತರ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆದ ಬಳಿಕ ನೌಕಾದಳ ನೀಡಿರುವ ಹೇಳಿಕೆಯಲ್ಲಿ, ಪಾಕಿಸ್ತಾನದ ವಿರುದ್ಧ ಕೃತ್ಯ ನಡೆಸುವ ಎಲ್ಲಾ ಶಕ್ತಿಗಳಿಗೂ ಇದೊಂದು ಎಚ್ಚರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚೀನಾ ನಿರ್ಮಿತ ಎಫ್-22ಪಿ ನೆಲದಿಂದ ನೆಗೆಯುವ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಹಾರಿಸಿದೆ. ಅದೇ ರೀತಿ ಆಕಾಶದಿಂದ ಭೂಮಿಗೆ ನೆಗೆಯಬಲ್ಲ ಪಿ3ಸಿ ಹೆಸರಿನ ಕ್ಷಿಪಣಿಯನ್ನೂ ಸಮುದ್ರ ಕಾವಲು ಯುದ್ಧ ವಿಮಾನದ ಮೂಲಕ ಪರೀಕ್ಷೆಗೆ ಒಡ್ಡಿದೆ.

ಪಾಕಿಸ್ತಾನದ ಈ ಯಶಸ್ವಿ ಪ್ರಯೋಗಕ್ಕೆ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ನೂಮನ್ ಬಶೀರ್, ಅಧಿಕಾರಿಗಳು ಹಾಗೂ ಸರ್ಕಾರ ಶಬ್ಬಾಸ್ ಗಿರಿ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ