ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಹೋರ್ ಸ್ಫೋಟ: ಪಾಕ್ ಆರ್ಮಿಗೆ ಉಗ್ರರ ಸವಾಲ್! (Lahore | Serial bomb blasts | Taliban | suicide bomber)
Bookmark and Share Feedback Print
 
ಲಾಹೋರ್‌ನಲ್ಲಿ ಶುಕ್ರವಾರ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ 45ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಇದು ಪಾಕಿಸ್ತಾನದ ಮಿಲಿಟರಿಗೆ ಸವಾಲಿನ ಪ್ರಶ್ನೆಯಾಗಿದೆ.

ಮಿಲಿಟರಿ ವಾಹನಗಳನ್ನು ಗುರಿಯಾಗಿರಿಸಿಕೊಂಡು ನಡೆಸಿದ ಈ ಸ್ಫೋಟದ ಹಿಂದೆ ಪಂಜಾಬ್ ತಾಲಿಬಾನ್ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದು, ತಾಲಿಬಾನ್ ಉಗ್ರರ ಅಟ್ಟಹಾಸ ಮಟ್ಟಹಾಕಲು ಪಾಕ್ ಮಿಲಿಟರಿಗೆ ಕಷ್ಟಸಾಧ್ಯ ಎಂಬ ಎಚ್ಚರಿಕೆಯ ಸಂದೇಶ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹದಿನೈದು ನಿಮಿಷಗಳ ಅಂತರದಲ್ಲಿ ಎರಡು ಆತ್ಮಹತ್ಯಾ ಬಾಂಬರ್ ದಾಳಿ ನಡೆಸಲಾಗಿತ್ತು. ಸಿಎಸ್‌ಎಫ್‌ನ ವಾಹನಗಳನ್ನು ಗುರಿಯಾಗಿರಿಸಿಕೊಂಡು ಆತ್ಮಹತ್ಯಾ ಬಾಂಬರ್‌ಗಳು ಈ ದಾಳಿ ನಡೆಸಿರುವುದಾಗಿ ಪ್ರಾಂತೀಯ ಕಾನೂನು ಸಚಿವ ರಾಣಾ ಸಾನಾ ಉಲ್ಲಾ ತಿಳಿಸಿದ್ದಾರೆ.

ಜನನಿಬಿಡ ಆರ್.ಎ.ಬಜಾರ್‌ನ ಮಸೀದಿ ಸಮೀಪ ಗಸ್ತಿನಲ್ಲಿದ್ದ ಮಿಲಿಟರಿ ವಾಹನವನ್ನು ಗುರಿಯಾಗಿರಿಸಿ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಅವರು ಹೇಳಿದರು. ಸ್ಫೋಟದಲ್ಲಿ ಹತ್ತು ಮಿಲಿಟರಿ ಜವಾನರು ಸೇರಿದಂತೆ 45ಮಂದಿ ಬಲಿಯಾಗಿದ್ದರು.

ಪಾಕಿಸ್ತಾನದ ಮಿಲಿಟರಿ ತನಿಖಾ ಕೇಂದ್ರವನ್ನು ಗುರಿಯಾಗಿರಿಸಿಕೊಂಡು ಉಗ್ರರು ನಡೆಸಿದ ಸ್ಫೋಟದಲ್ಲಿ 15ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಶುಕ್ರವಾರ ಸರಣಿ ಸ್ಫೋಟ ನಡೆಸುವ ಮೂಲಕ ಜನರಲ್ಲಿ ಭಯದ ವಾತಾವರಣ ಮೂಡಿಸಲು ಉಗ್ರರು ಪ್ರಯತ್ನಿಸುತ್ತಿರುವುದಾಗಿ ಉಲ್ಲಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ