ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್:ಯುವತಿ ಮೇಲೆ ಅತ್ಯಾಚಾರ: ಭಾರತೀಯನಿಗೆ ಜೈಲುಶಿಕ್ಷೆ (Indian jailed | British court | raping teenager | Jagdeep Chahal)
Bookmark and Share Feedback Print
 
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬ್ರಿಟನ್ ನ್ಯಾಯಾಲಯ ಭಾರತೀಯ ಮೂಲದ 23ರ ಹರೆಯದ ಯುವಕನೊಬ್ಬನಿಗೆ 9ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಪ್ರಕರಣದ ಎರಡು ವಾರಗಳ ಕಾಲ ಇಸೆಲೆ‌ವರ್ಥ್ ಕ್ರೌನ್ ಕೋರ್ಟ್ ವಿಚಾರಣೆ ನಡೆಸಿದ ನಂತರ, ಜಗ್‌ದೀಪ್ ಚಾಹರ್ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದೆ. ಅಲ್ಲದೇ 9ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

2009ರ ಏಪ್ರಿಲ್ 8ರಂದು ಯುಕ್ಸ್‌ಬ್ರಿಡ್ಜ್ ಬಸ್ ನಿಲ್ದಾಣದ ಸಮೀಪದಿಂದ 18ರ ಹರೆಯದ ಯುವತಿಯೊಬ್ಬಳು ಹಾದುಹೋಗುತ್ತಿದ್ದ ಸಂದರ್ಭದಲ್ಲಿ ಚಾಹಾಲ್ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಆಕೆಯ ಮತ್ತೊಂದು ರಸ್ತೆಯತ್ತ ಸಾಗಿದಾಗ, ಈತ ಆಕೆಯ ಕೈಯನ್ನು ಬಲವಂತಾಗಿ ಹಿಡಿದಿದ್ದ. ಆ ಸಂದರ್ಭದಲ್ಲಿ ಆಕೆ ಕಿರುಚಿಕೊಂಡಿದ್ದಳು. ಬಳಿಕ ಆಕೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ನಡೆಸಿದ್ದ ಎಂದು ಕೋರ್ಟ್‌ಗೆ ಆಕೆಯ ಪರ ವಕೀಲರು ವಿವರಣೆ ನೀಡಿದ್ದರು.

ಹುಡುಗಿಯ ಕಿರುಚಾಟ ಕೇಳಿಸಿಕೊಂಡಿದ್ದ ದಾರಿಹೋಕರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ವಿಷಯ ತಿಳಿದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಆಗ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಚಾಹಾಲ್‌ನನ್ನು ಬಂಧಿಸಿ, ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಪೊಲೀಸರು ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ತಪ್ಪಿತಸ್ಥನೆಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ