ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಷ್ಕರ್ ಉಗ್ರರಿಗೆ ಪಾಕ್ ಕಡಿವಾಣ ಹಾಕ್ಬೇಕು: ಅಮೆರಿಕ ತಾಕೀತು (Islamabad | Lashkar-e-Toiba | Pakistan | Robert Blake | Mumbai terror)
Bookmark and Share Feedback Print
 
ಜಾಗತಿಕವಾಗಿ ಬೆದರಿಕೆ ಒಡ್ಡುತ್ತಿರುವ ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಇ ತೊಯ್ಬಾಕ್ಕೆ ಪಾಕಿಸ್ತಾನ ಕಡಿವಾಣ ಹಾಕಬೇಕು ಎಂದು ಅಮೆರಿಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಭಾರತದ ವಾಣಿಜ್ಯ ನಗರಿಯಾದ ಮುಂಬೈ ಮೇಲೆ ನಡೆಸಿದ ಭಯೋತ್ಪಾದನಾ ದಾಳಿಯ ಹಿಂದೆ ಲಷ್ಕರ್ ಇ ತೊಯ್ಬಾ ಸಂಘಟನೆಯ ಕೈವಾಡ ಇರುವುದಾಗಿ ಬಲವಾಗಿ ನಂಬಲಾಗಿದೆ ಎಂದು ಹೇಳಿರುವ ಅಮೆರಿಕ ಪಾಕ್ ಮೂಲದ ಈ ಉಗ್ರಗಾಮಿ ಸಂಘಟನೆ ಜಾಗತಿಕ ಮಟ್ಟದಲ್ಲಿ ತನ್ನ ಕಬಂಧಬಾಹು ಚಾಚಲು ಮುಂದಾಗಿದೆ ಎಂದು ಆರೋಪಿಸಿದೆ.

ಆ ನಿಟ್ಟಿನಲ್ಲಿ ಉಗ್ರ ಲಷ್ಕರ್ ಇ ತೊಯ್ಬಾಕ್ಕೆ ಪಾಕಿಸ್ತಾನ ಮೂಗುದಾರ ಹಾಕಬೇಕು ಎಂದು ಅಮೆರಿಕದ ವಿದೇಶಾಂಗ ಖಾತೆಯ ದಕ್ಷಿಣ ಮತ್ತು ಮಧ್ಯಾ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರೋಬೆರ್ಟ್ ಓ ಬ್ಲಾಕೆ ಅವರು ಜಪಾನ್ ಪತ್ರಿಕೆ ಅಶಾಯೈ ಶಿಂಬುನ್ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದನ ದಾಳಿಯ ನಂತರ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ