ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿಯಿಂದ ಈಗಲೂ ಪ್ರಜಾಪ್ರಭುತ್ವಕ್ಕೆ ಬೆದರಿಕೆ: ಶರೀಫ್ (threat to democracy | Asif Ali Zardari | Pakistan | Nawaz Sharif)
Bookmark and Share Feedback Print
 
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರೊಂದಿಗೆ ಸಮನ್ವಯಕಾರಿ ರಾಜಕೀಯ ನಿಲುವುಗಳನ್ನು ಹೊಂದಿರುವ ಹೊರತಾಗಿಯೂ ಅವರು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿಯೇ ಮುಂದುವರಿಯುತ್ತಿದ್ದಾರೆ ಎಂದು ಪಾಕಿಸ್ತಾನ್ ಮುಸ್ಲಿಂ ಮೀಗ್ ನವಾಜ್ (ಪಿಎಂ) ಮುಖ್ಯಸ್ಥ ನವಾಜ್ ಶರೀಫ್ ಆರೋಪಿಸಿದ್ದಾರೆ.

ಪಿಎಂಎಲ್‌ಎನ್ ಸ್ನೇಹಪರ ವಿರೋಧಪಕ್ಷವಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಶರೀಫ್, ಜರ್ದಾರಿಯವರು ಮಂಡಿಯೂರಿದ್ದಾರೆ ಮತ್ತು ಒತ್ತಡ ತಂತ್ರವನ್ನು ತನ್ನ ಪಕ್ಷವು ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ವಜಾಗೊಂಡಿದ್ದ ನ್ಯಾಯಾಧೀಶರನ್ನು ಮರಳಿಸಲು ಮತ್ತು ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ಆದೇಶವನ್ನು ರದ್ದುಪಡಿಸಲು ಈ ಹಿಂದೆ ನಡೆಸಿದ ಹೋರಾಟದಂತೆ ಮುಂದಿನ ದಿನಗಳಲ್ಲಿ ಪಕ್ಷವು ತನ್ನ ಒತ್ತಡ ತಂತ್ರವನ್ನು ಮುಂದುವರಿಸುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಶರೀಫ್ ಸ್ಪಷ್ಟಪಡಿಸಿದ್ದಾರೆ.

ಸಮುದಾಯ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಜರ್ದಾರಿಯವರು ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಸನ್ನದನ್ನು ಉಲ್ಲಂಘಿಸಿದ್ದಾರೆ ಎಂದೂ ಆರೋಪಿಸಿದರು.

ಅಧ್ಯಕ್ಷರ ಕಡೆಗಿನ ನನ್ನ ದೃಷ್ಟಿಕೋನ ಬದಲಾಗದು. ಎಲ್ಲಾ ವಿಚಾರಗಳ ಕುರಿತು ಚಿಂತಿಸಲು ಆಸಿಫ್ ಜರ್ದಾರಿಯವರಿಗೆ ಇದು ಸಕಾಲ. ನಾವು ಪ್ರಜಾಪ್ರಭುತ್ವದ ಸನ್ನದು ಕುರಿತು ಮುಂದುವರಿಯಲು ಬಯಸುತ್ತೇವೆ ಎಂದು ಶರೀಫ್ ಹೇಳಿದ್ದಾರೆಂದು 'ದಿ ನ್ಯೂಸ್' ವರದಿ ಮಾಡಿದೆ.

ಇತ್ತೀಚಿನ ಉಪ ಚುನಾವಣೆಗಳಲ್ಲಿ ಪಿಎಂಎಲ್ಎನ್ ಜಯಭೇರಿ ಬಾರಿಸಿರುವುದು ರಾಷ್ಟ್ರದ ರಾಜಕೀಯ ನಡೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿರುವ ಶರೀಫ್, ದೇಶಕ್ಕೆ ಅವನತಿಯತ್ತ ಕೊಂಡೊಯ್ಯುವ ರಾಜಕೀಯದ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ