ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್‌ನನ್ನು ಪಾಕ್ ದೇಶಭ್ರಷ್ಟ ಎಂದು ಘೋಷಿಸುವ ಸಾಧ್ಯತೆ (Kasab fugitive | Pakistan | Ajmal Kasab | Mumbai attacks)
Bookmark and Share Feedback Print
 
ಅಜ್ಮಲ್ ಕಸಬ್‌ನನ್ನು ದೇಶಭ್ರಷ್ಟ ಎಂದು ಘೋಷಿಸಬೇಕು ಎಂದು ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದ ಏಳು ಮಂದಿ ಶಂಕಿತರ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವೊಂದಕ್ಕೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಪ್ರಾಸಿಕ್ಯೂಷನ್ ಮನವಿ ಮಾಡಿಕೊಂಡಿದ್ದು, ವಿಚಾರಣೆಯನ್ನು ವಾರಗಳ ಮಟ್ಟಿಗೆ ಮುಂದೂಡಲಾಗಿದೆ.

ಕಸಬ್‌ನನ್ನು ಘೋಷಿತ ಅಪರಾಧಿ ಅಥವಾ ದೇಶಭ್ರಷ್ಟ ಎಂದು ಘೋಷಿಸುವಂತೆ 2008ರ ಮುಂಬೈ ದಾಳಿಗಳಲ್ಲಿ ಪಾಕಿಸ್ತಾನದ ಸಂಬಂಧದ ಕುರಿತು ತನಿಖೆ ನಡೆಸಿದ್ದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯು ಭಯೋತ್ಪಾದನಾ ತಡೆ ನ್ಯಾಯಾಲಯದ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ಅವರಲ್ಲಿ ಮನವಿ ಮಾಡಿಕೊಂಡಿದೆ.

ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಮಾರ್ಚ್ 20ಕ್ಕೆ ನಿಗದಿ ಪಡಿಸಿದೆ. ಈ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಆಲಿಸಲಿದೆ.

ಇಂದು ಹಲವು ಸಾಕ್ಷಿಗಳ ವಿಚಾರಣೆ ನಡೆಯುವುದೆಂದು ನಿಗದಿಯಾಗಿತ್ತು. ಆದರೆ ಫೆಡರಲ್ ಏಜೆನ್ಸಿಯ ಅರ್ಜಿಯ ಹಿನ್ನೆಲಯಲ್ಲಿ ನ್ಯಾಯಾಲಯವು ಅದರತ್ತ ಗಮನ ಹರಿಸಲಿಲ್ಲ ಎಂದು ಮೂಲಗಳು ಹೇಳಿವೆ.

ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಝಾಕೀರ್ ರೆಹಮಾನ್ ಲಖ್ವಿ, ಜರಾರ್ ಶಾಹ್, ಅಹು ಅಲ್ ಕಾಮಾ, ಹಮಾದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಜೂನಸ್ ಅಂಜುಮ್ ಎಂಬ ಏಳು ಆರೋಪಿಗಳ ವಿಚಾರಣೆಯನ್ನು ಕಸಬ್ ವಿಚಾರಣೆಯಿಂದ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ ಎಂದು ಲಾಹೋರ್ ಹೈಕೋರ್ಟ್ ಇದೇ ವಾರದ ಆರಂಭದಲ್ಲಿ ಆದೇಶ ನೀಡಿದ ನಂತರ ಫೆಡರಲ್ ಏಜೆನ್ಸಿಯ ಮನವಿ ಅತ್ಯಗತ್ಯವಾಗಿತ್ತು.

ಈ ನಡುವೆ ಆರೋಪಿಗಳ ಪರ ವಕೀಲರು ಫೆಡರಲ್ ಏಜೆನ್ಸಿಯ ನಿರ್ಧಾರವನ್ನು ವಿರೋಧಿಸಿ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಕಸಬ್ ಭಾರತದ ವಶದಲ್ಲಿರುವುದರಿಂದ ಕಾನೂನಿನ ಪ್ರಕಾರ ಆತನನ್ನು ದೇಶಭ್ರಷ್ಟ ಎಂದು ಹೇಳಲು ಸಾಧ್ಯವಿಲ್ಲ ಎಂದು ವಕೀಲರು ವಾದಿಸಲು ಮುಂದಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ