ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ತ್ ಕ್ರಿಶ್ಚಿಯನ್-ಮುಸ್ಲಿಂ ಸಂಘರ್ಷ; 24 ಮಂದಿ ಗಾಯ (Christian | Muslim | Egypt | Cairo)
Bookmark and Share Feedback Print
 
ಈಜಿಪ್ತ್ ಉತ್ತರ ಭಾಗದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವೆ ಶುಕ್ರವಾರ ನಡೆದ ಭಾರೀ ಘರ್ಷಣೆಯಿಂದಾಗಿ ಕನಿಷ್ಠ 24 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಎರಡು ಕೋಮುಗಳ ನಡುವೆ ಭಾರೀ ಪ್ರಮಾಣದಲ್ಲಿ ಗುಂಡು ಹಾರಾಟ ನಡೆದಿದೆ. ಆದರೆ ಇದನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಸಮರ್ಥವಾಗಿವೆ. ಘಟನೆಯಿಂದಾಗಿ ಮೂರು ಮನೆಗಳು ಹಾಗೂ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮಾರ್ಸಾ ಮತ್ರೋಹ್‌ ರಾಜ್ಯಪಾಲ ಅಹ್ಮದ್ ಹುಸೇನ್ ರಾಷ್ಟ್ರೀಯ ವಾಹಿನಿಗೆ ವಿವರಣೆ ನೀಡಿದ್ದಾರೆ.

ಕೋಮು ಹಿಂಸಾಚಾರದಿಂದಾಗಿ 24 ಮಂದಿ ಗಾಯಗೊಂಡಿದ್ದಾರೆ. ಇದುವರೆಗೆ ಯಾವುದೇ ಸಾವು ಸಂಭವಿಸಿರುವ ವರದಿಗಳು ಬಂದಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ.

ಕೋಪ್ಟಿಕ್ ಕ್ರಿಶ್ಚಿಯನ್ ಮತ್ತು ಈಜಿಪ್ತ್ ಮುಸ್ಲಿಮರ ನಡುವಿನ ಸಂಬಂಧಗಳು ಸಾಮಾನ್ಯವಾಗಿ ಸಮಾಧಾನಕರವಾಗಿರುತ್ತದೆ. ಆದರೆ ಆಂತರಿಕ ನಂಬಿಕೆಗಳ ಸಂಬಂಧಗಳು ಮತ್ತು ಭೂ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಎರಡು ಸಮುದಾಯಗಳ ನಡುವೆ ಕೆಲವೊಮ್ಮೆ ಹಿಂಸಾಚಾರ ಭುಗಿಲೇಳುತ್ತದೆ.

ಈಜಿಪ್ತ್‌ನ 78 ಮಿಲಿಯನ್ ಜನತೆಯಲ್ಲಿ ಕ್ರಿಶ್ಚಿಯನ್ ಸಮುದಾಯದವರ ಸಂಖ್ಯೆ ಸರಿ ಸುಮಾರು ಶೇ.10ರಷ್ಟು ಮಾತ್ರ. ಉಳಿದ ಬಹುತೇಕರು ಸುನ್ನಿ ಮುಸ್ಲಿಮರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ