ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ವಿಶ್ವಾಸ ಕೊರತೆ ನೀಗಿಸುವ ಭರವಸೆಯಲ್ಲಿ ಪಾಕಿಸ್ತಾನ (Pakistan | US | Yousuf Raza Gilani | Gen Ashfaq Pervez Kayani)
Bookmark and Share Feedback Print
 
ಅಮೆರಿಕಾ ಜತೆಗೆ ಈಗಿರುವ ನಂಬಿಕೆಯ ಕೊರತೆಯನ್ನು ನಿವಾರಿಸಲು ಪಾಕಿಸ್ತಾನ ಬಯಸುತ್ತಿದ್ದು, ಮುಂದಿನ ಮಾತುಕತೆ ಸಂದರ್ಭದಲ್ಲಿ ಸುದೀರ್ಘ ಅವಧಿಯ ಸಂಬಂಧಕ್ಕಾಗಿ ಗಟ್ಟಿಯಾದ ಚೌಕಟ್ಟನ್ನು ರೂಪಿಸುವತ್ತ ಗಮನ ಹರಿಸಲಿದೆ ಎಂದು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಶನಿವಾರ ತಿಳಿಸಿದ್ದಾರೆ.

ಜನರಿಂದ ಜನರ ನಡುವಿನ ಸಂಬಂಧಗಳನ್ನು ವೃದ್ಧಿಸುವ ಮೂಲಕ ವಿಶ್ವಾಸದ ಕೊರತೆಯನ್ನು ನೀಗಿಸುವುದೇ ಈ ಮಾತುಕತೆಯ ಪ್ರಮುಖ ಉದ್ದೇಶವಾಗಿದೆ ಎಂದು ದೇಶದ ನಾಗರಿಕ ಮುಖಂಡರು ಹಾಗೂ ಮಿಲಿಟರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ಗಿಲಾನಿ ತಿಳಿಸಿದ್ದಾರೆ.

ಮಾತುಕತೆಯ ರೂಪುರೇಷೆಗಳ ಕುರಿತು ತನ್ನ ಮಾತುಗಳನ್ನು ಹಂಚಿಕೊಂಡ ಗಿಲಾನಿ, ತನ್ನ ಸರಕಾರವು ಮಾತುಕತೆಯ ಮಟ್ಟವನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ಮಾತ್ರ ಹೊಂದಿರುವುದಲ್ಲ; ಪಾಕಿಸ್ತಾನ - ಅಮೆರಿಕಾ ಪಾಲುದಾರಿಕೆಯನ್ನು ಸಹಕಾರ ಮಟ್ಟಕ್ಕೆ ಕೊಂಡೊಯ್ಯುವುದು, ಪಾಕಿಸ್ತಾನ ಮತ್ತು ಅಮೆರಿಕಾ ನಡುವಿನ ಸಂಬಂಧವನ್ನು ಸುದೀರ್ಘ ಅವಧಿಯವರೆಗೆ ಗಟ್ಟಿಮುಟ್ಟಾಗಿಸಲು ಅಗತ್ಯ ತಳಹದಿಯನ್ನು ಅಭಿವೃದ್ಧಿಪಡಿಸುವುದು ಮುಂತಾದ ಉದ್ದೇಶಗಳನ್ನೂ ಹೊಂದಿದೆ ಎಂದರು.

ಪಾಕಿಸ್ತಾನ ಮತ್ತು ಅಮೆರಿಕಾ ನಡುವಿನ ಮಾತುಕತೆ ವಾಷಿಂಗ್ಟನ್‌ನಲ್ಲಿ ಮಾರ್ಚ್ 24ರಂದು ನಡೆಯಲಿದೆ ಎಂದು ದಿನ ನಿಗದಿಪಡಿಸಲಾಗಿದೆ. ಈ ಮಾತುಕತೆ ಆರ್ಥಿಕ, ರಕ್ಷಣೆ, ಭದ್ರತೆ ಮತ್ತು ಸಾಮಾಜಿಕ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿಯವರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಜಲ ಮತ್ತು ಇಂಧನ ಖಾತೆ ಸಚಿವ ರಾಜಾ ಫರ್ವೀಜ್ ಅಶ್ರಫ್, ಮಿಲಿಟರಿ ಮುಖ್ಯಸ್ಥ ಜನರಲ್ ಅಶ್ಫಕ್ ಫರ್ವೇಜ್ ಕಯಾನಿ ಮತ್ತು ಅಗ್ರ ಮಿಲಿಟರಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ