ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಮ್ಮನ್ನು ಬಾಡಿ ಸ್ಕ್ಯಾನಿಂಗ್‌ನಿಂದ ಹೊರಗಿಡಿ: ಅಮೆರಿಕಾಕ್ಕೆ ಪಾಕ್ (Pakistan | United States | Husain Haqqani | full body scanning)
Bookmark and Share Feedback Print
 
ಅಮೆರಿಕಾ ವಿಮಾನ ನಿಲ್ದಾಣಗಳಲ್ಲಿ ಇಡೀ ದೇಹವನ್ನು ಸ್ಕ್ಯಾನಿಂಗ್‌ಗೊಳಪಡಿಸಬೇಕಾದ ಪಟ್ಟಿಯಿಂದ ತನ್ನ ದೇಶವನ್ನು ಕೈ ಬಿಡುವಂತೆ ಅಮೆರಿಕಾದಲ್ಲಿನ ಪಾಕಿಸ್ತಾನದ ರಾಯಭಾರಿ ಹುಸೇನ್ ಹಖಾನಿಯವರು ಒಬಾಮಾ ಆಡಳಿತವನ್ನು ಒತ್ತಾಯಿಸಿದ್ದಾರೆ.

ಅಮೆರಿಕಾದ ಹೋಮ್ಲೆಂಜ್ ಸೆಕ್ಯುರಿಟಿ ಇಲಾಖೆಯ ನೀತಿ ವಿಭಾಗದ ಸಹಾಯಕ ಕಾರ್ಯದರ್ಶಿ ಡೇವಿಡ್ ಹೇಮ್ಯಾನ್ ಅವರನ್ನು ಭೇಟಿಯಾದ ಹಖಾನಿಯವರು, ಅಮೆರಿಕಾದ ಪ್ರಮುಖ ಮಿತ್ರ ರಾಷ್ಟ್ರವಾಗಿರುವ ಪಾಕಿಸ್ತಾನದ ಪ್ರಜೆಗಳಿಗೆ ಗೌರವ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪಾಕಿಸ್ತಾನವು ಅಮೆರಿಕಾದ ಪ್ರಮುಖ ಮಿತ್ರ ರಾಷ್ಟ್ರವಾಗಿರುವುದರಿಂದ ಅಮೆರಿಕಾ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ತಾರತಮ್ಯ ನೀತಿಗಳು ಪಾಕ್ ಜನತೆಯ ಮನಸ್ಸಿಗೆ ತೀವ್ರ ನೋವನ್ನು ತರಬಹುದು ಎಂದು ಹಕಾನಿ ಹೇಳಿದ್ದಾರೆಂದು ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಕಳೆದ ಕೆಲವು ದಿನಗಳ ಹಿಂದೆ ಅಮೆರಿಕಾಕ್ಕೆ ಹೋಗಿದ್ದ ಪಾಕಿಸ್ತಾನ ರಾಷ್ಟ್ರೀಯ ಸಂಸತ್ ಮತ್ತು ಸೆನೆಟ್ ನಿಯೋಗವು ಅಲ್ಲಿ ಬಾಡಿ ಸ್ಕ್ಯಾನ್‌ಗೊಳಪಡಲು ನಿರಾಕರಿಸಿ ಪ್ರವಾಸವನ್ನು ರದ್ದುಪಡಿಸಿ ತವರಿಗೆ ವಾಪಸಾಗಿತ್ತು.

ಹಿರಿಯ ಸಂಸದ ಅಬ್ಬಾಸ್ ಖಾನ್ ಆಫ್ರಿದಿ ನೇತೃತ್ವದ ನಿಯೋಗವು ಡಲ್ಲಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಬಾಡಿ ಸ್ಕ್ಯಾನರಿಗೊಳಪಡಲು ನಿರಾಕರಿಸಿತ್ತು. ಇದು ನಮ್ಮ ದೇಶದ ಸಂಸದೀಯ ಸ್ವತಂತ್ರತೆಗೆ ಅವಮಾನವಾಗುತ್ತದೆ ಎಂಬುದು ಅವರ ವಾದವಾಗಿತ್ತು.

ತಾವು ಬಾಡಿ ಸ್ಕ್ಯಾನಿಂಗ್‌ಗೆ ಒಳಪಡಬೇಕಾಗಿಲ್ಲ ಎಂದು ಭರವಸೆ ನೀಡಿದ ನಂತರವಷ್ಟೇ ತಾವು ಪಾಕಿಸ್ತಾನದಿಂದ ಹೊರಟಿದ್ದೆವು. ಆದರೆ ಅಲ್ಲಿಗೆ ಹೋದ ನಂತರ ಕೊಟ್ಟ ಮಾತಿಗೆ ಅವರು ತಪ್ಪಿದ್ದಾರೆ ಎಂದು ಆಫ್ರಿದಿ ಆರೋಪಿಸಿದ್ದರು.

ಅಮೆರಿಕಾ ಜಾರಿಗೆ ತಂದಿರುವ ನೂತನ ನಿಯಮಾವಳಿಗಳ ಪ್ರಕಾರ ಪಾಕಿಸ್ತಾನ, ಅಫಘಾನಿಸ್ತಾನ, ಅಲ್ಜೀರಿಯಾ, ಲೆಬನಾನ್, ಲಿಬಿಯಾ, ಇರಾಕ್, ನೈಜೀರಿಯಾ, ಸೌದಿ ಅರೇಬಿಯಾ, ಸೋಮಾಲಿಯಾ ಮತ್ತು ಯೆಮನ್ ಪ್ರಜೆಗಳು ಕಡ್ಡಾಯವಾಗಿ ಬಾಡಿ ಸ್ಕ್ಯಾನ್ ತಪಾಸಣೆಗೊಳಬೇಕಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ