ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಷ್ಕರ್ ಟಾರ್ಗೆಟ್ 320, ಅದರಲ್ಲಿ 20 ಭಾರತದಲ್ಲಿದೆ: ಅಮೆರಿಕಾ (US lawmaker | Pakistan | Lashkar-e-Taiba | India)
Bookmark and Share Feedback Print
 
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾವು ಭಾರತದ 20 ಗುರಿಗಳೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ 320 ಪ್ರಮುಖ ಟಾರ್ಗೆಟ್‌ಗಳನ್ನು ಹೊಂದಿದೆ ಎಂದು ಅಮೆರಿಕಾದ ಶಾಸಕಾಂಗ ಸದಸ್ಯರೊಬ್ಬರು ತಿಳಿಸಿದ್ದಾರೆ.

2008ರ ನವೆಂಬರ್ ತಿಂಗಳಲ್ಲಿ ನಡೆದ ಮುಂಬೈ ದಾಳಿಯ ಬಳಿಕ ತನಿಖಾದಳಗಳು ಲಷ್ಕರ್ ಇ ತೋಯ್ಬಾದ ನಿಯಂತ್ರಣ ದಾಖಲೆಗಳು ಮತ್ತು ಇಮೇಲ್ ಖಾತೆಗಳನ್ನು ಪರಿಶೀಲಿಸಿದಾಗ 320 ದಾಳಿಯ ಗುರಿಗಳನ್ನು ವಿಶ್ವದಾದ್ಯಂತ ಗುರುತಿಸಿರುವುದು ಬಯಲಿಗೆ ಬಂದಿದೆ. ಇದರಲ್ಲಿ 20 ಗುರಿಗಳು ಭಾರತದಲ್ಲಿವೆ ಎಂದು ಶಾಸಕಾಂಗದ ಸದಸ್ಯ ಗ್ಯಾರಿ ಅಕೆರ್ಮನ್ ತಿಳಿಸಿದ್ದಾರೆ.

ಲಷ್ಕರ್ ಇ ತೋಯ್ಬಾವು ಅಮೆರಿಕಾ ಪಡೆಗಳ ಮೇಲೆ ಆರಂಭದಿಂದಲೇ ಅಫಘಾನಿಸ್ತಾನದಲ್ಲಿ ದಾಳಿ ನಡೆಸುತ್ತಾ ಬಂದಿದೆ. ಈಗಲೂ ಈ ಸಂಘಟನೆಯ ಪಡೆಗಳು ಅಫಘಾನಿಸ್ತಾನದ ಉದ್ದಗಲಕ್ಕೂ ಹರಡಿಕೊಂಡಿದೆ. ಕಳೆದ ಒಂದು ದಶಕದಿಂದ ಲಷ್ಕರ್ ಇ ತೋಯ್ಬಾವು ಭಾರತೀಯರನ್ನು ಹತ್ಯೆ ಮಾಡುತ್ತಾ ಬಂದಿದೆ. ತಾವು ಹತ್ಯಾಕಾಂಡಗಳನ್ನು ತೀವ್ರಗೊಳಿಸುವ ಮತ್ತು ವಿಶ್ವದಾದ್ಯಂತ ಪಸರಿಸುವ ಇಚ್ಛೆಯನ್ನು ಹೊಂದಿರುವುದನ್ನು ಲಷ್ಕರ್ ಜಗತ್ತಿಗೆ ಹೇಳುತ್ತಾ ಬಂದಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಈ ದುರಾಚಾರಿಗಳ ಸಂಘಟನೆಯನ್ನು ಸರ್ವನಾಶ ಮಾಡಬೇಕಾದ ಅಗತ್ಯವಿದೆ. ಇದು ಇಂದು-ನಿನ್ನೆ ಆರಂಭವಾದ ಸಂಘಟನೆಯಲ್ಲ. ಅದು ಯಾವುದೇ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಅದನ್ನು ಮಟ್ಟ ಹಾಕಲು ನಾವು ಸಮರ್ಥವಾಗಿ ಕಾರ್ಯಾಚರಿಸುತ್ತಿಲ್ಲ. ಜಾಗತಿಕ ಪ್ರಯತ್ನವನ್ನು ನಾವು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಇದು ತೀರಾ ವಿಷಾದಕರ ವಿಚಾರ ಎಂದು ಅಕರ್ಮನ್ ತಿಳಿಸಿದ್ದಾರೆ.

ಅಂದಾಜುಗಳ ಪ್ರಕಾರ ಪಾಕಿಸ್ತಾನದ ನಗರಗಳು ಮತ್ತು ಗ್ರಾಮಗಳೂ ಸೇರಿದಂತೆ ಸುಮಾರು 2,000ದಷ್ಟು ಕಚೇರಿಗಳನ್ನು ಲಷ್ಕರ್ ಹೊಂದಿದೆ. ಇದು ಪಾಕಿಸ್ತಾನ ಮಿಲಿಟರಿಯೊಂದಿಗೆ ಕೂಡ ಸ್ನೇಹಪರ ಸಂಬಂಧವನ್ನೇ ಹೊಂದಿದೆ. ಅಲ್ಲದೆ ಮುಂಬೈ ದಾಳಿಯಲ್ಲಿ ಮೃತರಾದ ಭಯೋತ್ಪಾದಕರ ಮಕ್ಕಳಿಗೆ ಪಾಕಿಸ್ತಾನ ಮಿಲಿಟರಿ ಪರಿಹಾರ ನೀಡುತ್ತಿದೆ ಎನ್ನುವುದನ್ನು ಸಂಶಯಿಸಲು ಕಾರಣಗಳೇ ಇಲ್ಲ. ಆದರೆ ಇವರು ಕೂಡ ಭಯೋತ್ಪಾದನೆಯ ವಿರುದ್ಧದ ನಮ್ಮ ಮಿತ್ರರು ಎಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ