ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ನೆಲೆಗಳ ಮೇಲೆ ಪಾಕ್ ದಾಳಿ; 18 ಉಗ್ರರ ಹತ್ಯೆ (Taliban | Pakistan | Aurakzai tribal region | militants)
Bookmark and Share Feedback Print
 
ವಾಯುವ್ಯ ಪಾಕಿಸ್ತಾನದ ಅಶಾಂತಿಯುತ ಔರಾಕ್ಜೈ ಬುಡಕಟ್ಟು ಪ್ರದೇಶದ ತಾಲಿಬಾನ್ ನೆಲೆಗಳಿಗೆ ದಾಳಿ ನಡೆಸಿರುವ ಪಾಕಿಸ್ತಾನ ಫೈಟರ್ ಜೆಟ್‌ಗಳು, ಸುಮಾರು 18 ಭಯೋತ್ಪಾದಕರನ್ನು ಕೊಂದು ಹಾಕಿವೆ.

ಔರಾಕ್ಜೈ ಪ್ರದೇಶದ ಹಲವು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ಫೈಟರ್ ಜೆಟ್‌ಗಳು ಉಗ್ರರ ಕಡೆ ಭಾರೀ ಹಾನಿ ಮಾಡಿದ್ದು, ಬಂಡುಕೋರರ ವಿರುದ್ಧ ಮತ್ತಷ್ಟು ದಾಳಿಗಳನ್ನು ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಜೆಟ್‌ಗಳು ನಡೆಸಿದ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಅಸ್ಲಾಂ ಫಾರೂಕಿಯ ಮಾವನ ಮನೆಯಿರುವ ಮಿರೋವಾಕ್ ಪ್ರದೇಶ ಪ್ರಮುಖವಾಗಿತ್ತು. ಆದರೆ ಅಸ್ಲಾಂ ಫಾರೂಕಿ ಘಟನೆಯಲ್ಲಿ ಮೃತನಾಗಿದ್ದಾನೆಯೇ ಎಂಬುದರ ಬಗ್ಗೆ ಮಿಲಿಟರಿ ಮೂಲಗಳು ಯಾವುದೇ ಉತ್ತರವನ್ನು ನೀಡಿಲ್ಲ.

ಜೆಟ್ ನಡೆಸಿದ ದಾಳಿಯಲ್ಲಿ ಎಂಟು ಭಯೋತ್ಪಾದಕರ ಅಡಗುದಾಣಗಳು ಹಾಗೂ ಒಂದು ಹುಡುಗಿಯರ ಪ್ರೌಢ ಶಾಲೆ ಸಂಪೂರ್ಣ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಾಯುದಾಳಿ ನಡೆಯುತ್ತಿದ್ದಂತೆ ಪಾಕಿಸ್ತಾನದ ಮಿಲಿಟರಿಯ ಹಲವು ಪಡೆಗಳು ಔರಾಕ್ಜೈ ಪ್ರದೇಶದತ್ತ ಧಾವಿಸಿವೆ. ಕುಲಬಾ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿರುವ ಮಿಲಿಟರಿ ಭದ್ರತೆಯನ್ನು ಬಿಗಿಗೊಳಿಸಿದ್ದು, ಪ್ರತೀ ಪ್ರವೇಶ ಪ್ರದೇಶದಲ್ಲಿ ಹೆಚ್ಚಿನ ತಪಾಸಣೆಗಳನ್ನು ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಸೇನೆಯನ್ನು ಭಾರೀ ಪ್ರಮಾಣದಲ್ಲಿ ನಿಯೋಜನೆಗೊಳಿಸಿರುವುದರಿಂದ ಔರಕ್ಜೈ ಪ್ರದೇಶದ ತಾಲಿಬಾನ್ ವಿರುದ್ಧ ಬೃಹತ್ ಕಾರ್ಯಾಚರಣೆಯನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ