ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರಗಾಮಿ ಸಂಘಟನೆಯನ್ನ ಬೆಂಬಲಿಸೋಲ್ಲ: ಮುಲ್ಲಾ ಅಬ್ದುಲ್ (Taliban | Mullah Abdul | Kabul | Lashkar-e-Taiba | Pakistan)
Bookmark and Share Feedback Print
 
ತಾಲಿಬಾನ್ ಯಾವತ್ತೂ ಭಾರತ ವಿರೋಧಿಯಲ್ಲ, ಅಲ್ಲದೇ ಅಂತಹವರನ್ನು ಬೆಂಬಲಿಸುವುದೂ ಇಲ್ಲ ಎಂದು ತಾಲಿಬಾನ್ ಸಂಘಟನೆಯ ಮಾಜಿ ಮುಖಂಡ ಮುಲ್ಲಾ ಅಬ್ದುಲ್ ಸಲಾಂ ಜಯೀಫ್ ಸಿಎನ್‌ಎನ್-ಐಬಿಎನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾನೆ.

ಕಾಬೂಲ್‌ನಲ್ಲಿ ವಾಸ್ತವ್ಯ ಹೂಡಿರುವ ಜಯೀಫ್, ತಾಲಿಬಾನ್ ವರಿಷ್ಠ ಮುಲ್ಲಾ ಓಮರ್‌ನನ್ನು ಪಾಕಿಸ್ತಾನ ತಾಲಿಬಾನ್‌ನ ಅಂಬಾಸಡಾರ್ ಆಗಿ ನೇಮಕ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೇ ತಾಲಿಬಾನ್ ಭಾರತದ ವಿರೋಧಿಗಳನ್ನು ಬೆಂಬಲಿಸುವುದಿಲ್ಲ ಎಂಬುದಾಗಿಯೂ ತಿಳಿಸಿದ್ದಾನೆ.

ಲಷ್ಕರ್ ಇ ತೊಯ್ಬಾ ನಿಮಗೆ ಉಗ್ರಗಾಮಿ ಸಂಘಟನೆಯಾಗಿರಬಹುದು, ಆದರೆ ನನ್ನ ಮಟ್ಟಿಗೆ ಅಲ್ಲ ಎಂದು ಹೇಳಿರುವ ಆತ, ಕಂದಾಹಾರ್ ವಿಮಾನ ಅಪಹರಣದಲ್ಲಿ ತಾಲಿಬಾನ್ ಶಾಮೀಲಾಗಿರುವುದನ್ನು ತಳ್ಳಿಹಾಕಿ, ಭಯೋತ್ಪಾದನೆ ಸಂಘಟನೆಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.

ಅಫ್ಘಾನಿಸ್ತಾನ ತುಂಬಾ ಸದ್ಯದ ಸ್ಥಿತಿಯಲ್ಲಿ ದುರ್ಬಲವಾಗಿದೆ, ಹಾಗಾಗಿ ಭಾರತ ಮತ್ತು ಪಾಕಿಸ್ತಾನ ಅಲ್ಲಿನ ಗಡಿಭಾಗದಲ್ಲಿ ಹೋರಾಟ ನಡೆಸಲು ಹಾತೊರೆಯುತ್ತಿವೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ