ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾರ್ಟೂನಿಸ್ಟ್ ಹತ್ಯೆಗೆ ಸಂಚು; ಅಮೆರಿಕಾ ಮಹಿಳೆ ಬಿಡುಗಡೆ (Swedish cartoonist | US woman | Irish police | Jamie Paulin-Ramirez)
Bookmark and Share Feedback Print
 
ಸ್ವೀಡನ್ ವ್ಯಂಗ್ಯ ಚಿತ್ರಕಾರ ಲಾರ್ಸ್ ವಿಲ್ಕ್ಸ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ ಆರೋಪದ ಮೇಲೆ ಐರ್ಲೆಂಡ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅಮೆರಿಕನ್ ಮಹಿಳೆ ಮತ್ತು ಇತರ ಮೂವರನ್ನು ಯಾವುದೇ ಆರೋಪ ಹೊರಿಸದೆ ಬಿಡುಗಡೆ ಮಾಡಲಾಗಿದೆ.

ಅಮೆರಿಕಾ ಮಹಿಳೆ, ಮೂವರು ಅಲ್ಜೀರಿಯಾ ಪ್ರಜೆಗಳು, ಓರ್ವ ಲಿಬಿಯಾ ಪ್ರಜೆ, ಓರ್ವ ಪಾಲೆಸ್ತೇನ್ ಪ್ರಜೆ ಮತ್ತು ಇನ್ನೊಬ್ಬ ಕ್ರೊವೇಶಿಯಾ ಪ್ರಜೆಯನ್ನು ಕಳೆದ ಮಂಗಳವಾರ ಐರ್ಲೆಂಡ್ ಪೊಲೀಸರು ಬಂಧಿಸಿದ್ದರು. ಅವರಲ್ಲಿ ನಾಲ್ವರನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ಮೂವರನ್ನು ವಶದಲ್ಲಿಟ್ಟುಕೊಳ್ಳಲಾಗಿದೆ, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾದಿ ಮೊಹಮ್ಮದ್ ಅವರ ಅವಹೇಳನಕಾರಿ ವ್ಯಂಗ್ಯಚಿತ್ರವನ್ನು ಲಾರ್ಸ್ ಅವರು ಬಿಡಿಸಿದ್ದಾರೆ ಎಂದು ಆರೋಪಿಸಿ ಲಷ್ಕರ್ ಇ ತೋಯ್ಬಾದ ಜತೆ ಸಂಬಂಧ ಹೊಂದಿದ್ದ ಸಂಘಟನೆಯೊಂದು ಹತ್ಯೆಗೆ ಸಂಚು ರೂಪಿಸಿತ್ತು.

ಬಂಧಿತ ಅಮೆರಿಕಾ ಮಹಿಳೆ 31ರ ಹರೆಯದ ಜೇಮ್ ಪೌಲಿನ್ ರಮಿರೆಜ್ ತಾಯಿ ಕ್ರಿಸ್ಟಿನ್ ಮೋಟ್ ಕೊಲ್ಯಾರಾಡೋದ ಲೀಡ್‌ವಿಲ್ಲೆಯಲ್ಲಿ ಮಾತನಾಡುತ್ತಾ, ತನ್ನ ಮಗಳು ತೀರಾ ಅಸುರಕ್ಷಿತಳು ಮತ್ತು ಅಸಂತೋಷ ವ್ಯಕ್ತಿತ್ವದವಳು. ಹಾಗಾಗಿ ನೋಡುವಾಗ ಆಕೆ ಸಂಶಯಿತರಂತೆ ತೋರುತ್ತಾಳೆ ಎಂದಿದ್ದಾರೆ.

ಅಮೆರಿಕನ್ನರು ವಿದೇಶಗಳಲ್ಲಿ ಕುಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪಗಳಲ್ಲಿ ಒಂದೇ ವಾರದಲ್ಲಿ ಬಂಧನಕ್ಕೊಳಗಾದ ನಾಲ್ಕನೇ ಪ್ರಕರಣ ಪೌಲಿನ್ ರಮಿರೆಜ್ ಅವಳದ್ದಾಗಿದೆ.

ಆದರೆ ಐರ್ಲೆಂಡ್ ಪೊಲೀಸರು ಬಂಧನದಲ್ಲಿರುವ ಅಥವಾ ಬಿಡುಗಡೆ ಮಾಡಿರುವ ವ್ಯಕ್ತಿಗಳ ವಿವರಣೆಗಳನ್ನು ನೀಡಲು ನಿರಾಕರಿಸಿದ್ದಾರೆ. ಬಿಡುಗಡೆಯಾದ ಮಹಿಳೆ ಪೌಲಿನ್ ರಮಿರೆಜ್ ಎಂಬುದನ್ನೂ ಅವರು ಖಚಿತಪಡಿಸಿಲ್ಲ.

ಪೌಲಿನ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಐರ್ಲೆಂಡ್‌ಗೆ ತನ್ನ ಆರು ವರ್ಷದ ಪುತ್ರನೊಂದಿಗೆ ಹೋಗಿದ್ದಳು. ನಂತರ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಆಲ್ಜೀರಿಯಾ ವ್ಯಕ್ತಿಯನ್ನು ಮದುವೆಯಾಗಿದ್ದಳು ಎಂದೂ ಆಕೆಯ ತಾಯಿ ಮೋಟ್ ತಿಳಿಸಿದ್ದಾರೆ.

ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದಾಗಿ ಮಗಳು ಕಳೆದ ವರ್ಷವೇ ಹೇಳಿದ್ದಳು. ಅಲ್ಲದೆ ಬುರ್ಖಾ ಧರಿಸಲು ಕೂಡ ತಾನು ಸಿದ್ಧಳಿದ್ದೇನೆ ಎಂದು ಕುಟುಂಬಕ್ಕೆ ತಿಳಿಸಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ