ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನ ಅಪಹರಣ ಸಾಧ್ಯತೆ; ಏರ್‌ಪೋರ್ಟ್‌ಗಳಿಗೆ ಪಾಕ್ ಕಟ್ಟೆಚ್ಚರ (Pakistani airports | Pakistan | Taliban fighters | hijack aircrafts)
Bookmark and Share Feedback Print
 
ತಾಲಿಬಾನ್ ಭಯೋತ್ಪಾದಕರು ವಿಮಾನ ಅಪಹರಣಕ್ಕೆ ಕೈ ಹಾಕುವ ಸಾಧ್ಯತೆಗಳನ್ನು ಕಂಡುಕೊಂಡಿರುವ ಪಾಕಿಸ್ತಾನ ಬೇಹುಗಾರಿಕಾ ಪಡೆಯು ವಿಮಾನ ನಿಲ್ದಾಣಗಳಿಗೆ ತೀವ್ರ ಕಟ್ಟೆಚ್ಚರವನ್ನು ರವಾನಿಸಿದೆ.

ಪಾಕಿಸ್ತಾನದ ಭದ್ರತಾ ಪಡೆಗಳು ಇದುವರೆಗೆ ಹಲವು ಬಾರಿ ಶಸ್ತ್ರಾಸ್ತ್ರಗಳನ್ನು ವಿಮಾನದೊಳಕ್ಕೆ ಕೊಂಡೊಯ್ಯುವ ಹಲವು ಯತ್ನಗಳನ್ನು ವಿಫಲಗೊಳಿಸಿವೆ ಎಂದು ಡೈಲೀ ಟೈಮ್ಸ್ ವರದಿ ಮಾಡಿದೆ.

ಮಾರ್ಚ್ 10ರಂದು ಕರಾಚಿಯ ಖ್ವಾಯಿದ್ ಇ ಅಜಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನದೊಳಕ್ಕೆ ಪಿಸ್ತೂಲ್ ಮತ್ತು ಸ್ಫೋಟಕ ವಸ್ತುಗಳನ್ನು ಸಾಗಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು.

ಇದೇ ವಿಮಾನದಲ್ಲಿ ಬಂಧಿತನ ಸಹಚರರು ಯಾರಾದರೂ ಇದ್ದರೇ ಎಂಬ ಕುರಿತು ತನಿಖಾದಳಗಳು ಈಗಲೂ ತನಿಖೆ ನಡೆಸುತ್ತಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.

ಶನಿವಾರ ಇದೇ ರೀತಿಯ ಮತ್ತೊಂದು ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರಾಚಿಗೆ ಹೊರಟಿದ್ದ ವಿಮಾನದೊಳಗೆ ಶಸ್ತ್ರಾಸ್ತ್ರ ಕೊಂಡೊಯ್ಯಲು ಈತ ಯತ್ನಿಸಿದ್ದ ಎಂದು ತನಿಖಾ ದಳಗಳು ತಿಳಿಸಿವೆ.

ಈ ಪ್ರಯಾಣಿಕನ ಬ್ಯಾಗಿನಲ್ಲಿ ಜೋಡಣೆ ಮಾಡದ ಪಿಸ್ತೂಲ್ ಪತ್ತೆಯಾಗಿತ್ತು. ಆದರೆ ತನಿಖಾದಳಗಳ ಮೂಲಗಳ ಪ್ರಕಾರ ಈತ ಎರಡು ಬ್ಯಾಗುಗಳಲ್ಲಿ ಪಿಸ್ತೂಲಿನ ಕೆಲವು ಭಾಗಗಳನ್ನು ತುಂಬಿಸಿಕೊಂಡು ಬಂದಿದ್ದ.

ಪಂಜಾಬ್ ಗೃಹ ಸಚಿವಾಲಯವು ಪೊಲೀಸರು ಮತ್ತು ಕಾನೂನು ಜಾರಿ ಏಜೆನ್ಸಿಗಳಿಗೆ ಇದೇ ರೀತಿಯ ಎಚ್ಚರಿಕೆ ನೀಡಿದ್ದು ರಾವಲ್ಪಿಂಡಿ, ಇಸ್ಲಾಮಾಬಾದ್ ಮತ್ತು ಲಾಹೋರ್ ಮುಂತಾದ ಪ್ರಮುಖ ಪ್ರದೇಶಗಳಿಗೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಪೇಶಾವರ, ರಾವಲ್ಪಿಂಡಿ, ಇಸ್ಲಾಮಾಬಾದ್ ಮತ್ತು ಲಾಹೋರ್ ನಗರಗಳ ಮೇಲೆ ದಾಳಿ ನಡೆಸಲು ಆತ್ಮಹತ್ಯಾ ಬಾಂಬರುಗಳ ತಂಡವೊಂದಕ್ಕೆ ತರಬೇತಿ ನೀಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಪಂಜಾಬ್ ಆದೇಶ ನೀಡಿದೆ.

ಈ ಆತ್ಮಹತ್ಯಾ ಬಾಂಬರುಗಳಿಗೆ ಆತ್ಮಹತ್ಯಾ ಜಾಕೆಟ್‌ಗಳು, ರಿಮೋಟ್ ಕಂಟ್ರೋಲ್ ಹೊಂದಿರುವ ಸುಧಾರಿತ ಸ್ಫೋಟಕ ಪರಿಕರಗಳನ್ನು ಸಂಘಟನೆಗಳು ಒದಗಿಸಿವೆ ಎಂಬ ಮಾತಿಯನ್ನೂ ಪಂಜಾಬ್ ರಾಜ್ಯಾಡಳಿತ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ