ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2012 ಅಲ್ಲ, 4006ಕ್ಕೆ ಜಗತ್ತು ಅಂತ್ಯ: ಡಾ ವಿಂಚಿ ಭವಿಷ್ಯ! (Da Vinci | Vatican | London | world would end | Last Supper)
Bookmark and Share Feedback Print
 
2012ಕ್ಕೆ ಜಗತ್ತು ಪ್ರಳಯ ಆಗುತ್ತೆ ಎಂಬ ಮಾಯಾ ಜನರ ನಂಬಿಕೆಯ ಕ್ಯಾಲೆಂಡರ್‌ನ ಜ್ಯೋತಿಷ್ಯದ ಸುದ್ದಿ ಜಗತ್ತಿನಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಆ ಸುದ್ದಿ ಜನರ ಮನಸಿನಿಂದ ಮರೆಯಾಗುತ್ತಿರುವ ಮುನ್ನವೇ ಈ ಜಗತ್ತು 4006ಕ್ಕೆ ಅಂತ್ಯಗೊಳ್ಳಲಿದೆ ಎಂಬುದಾಗಿ ಇಟಾಲಿಯನ್‌ನ ಖ್ಯಾತ ಚಿತ್ರಕಾರ ಲಿಯೋನಾರ್ಡೋ ಡಾ ವಿಂಚಿ ಭವಿಷ್ಯವಾಣಿ ನುಡಿದಿರುವುದಾಗಿ ವಿಕ್ಟೋರಿಯಾದ ಸಂಶೋಧಕಿಯೊಬ್ಬರು ತಿಳಿಸಿದ್ದಾರೆ.

ಲಿಯೋನಾರ್ಡೋ ಡಾ ವಿಂಚಿ ಭವಿಷ್ಯವಾಣಿಯ ಪ್ರಕಾರ ಈ ಜಗತ್ತು 4006ರ ಮಾರ್ಚ್ ತಿಂಗಳಿನಲ್ಲಿ ವಿಶ್ವವ್ಯಾಪಿ ಪ್ರವಾಹ ಆರಂಭವಾಗಿ 4006 ನವೆಂಬರ್ 1ರಂದು ಭೂಮಂಡಲದ ಆಯುಷ್ಯ ಕೊನೆಗೊಳ್ಳಲಿದೆ ಎಂಬುದಾಗಿ ವಿಕ್ಟೋರಿಯನ್ ಸಂಶೋಧಕಿ ಸಾರ್ಬಿನಾ ಸರ್ಫೋಡಾ ಗಾಲಿಟ್‌ಜಿಯಾ ಹೇಳಿದ್ದಾರೆ.

ಆ ನಿಟ್ಟಿನಲ್ಲಿ 4006ರಲ್ಲಿ ಜಗತ್ತು ವಿನಾಶ ಹೊಂದುವ ಮೂಲಕ ಮತ್ತೆ ಹೊಸ ಮಾನವ ಜಗತ್ತು ಆವಿರ್ಭವಿಸಲಿದೆ ಎಂಬ ನಂಬಿಕೆ ತನ್ನದಾಗಿದೆ ಎಂದು ಆಕೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಡಾ ವಿಂಚಿಯ ಪ್ರಸಿದ್ಧ ಭಿತ್ತಿ ಚಿತ್ರವಾಗಿರುವ 'ಜೀಸಸ್ ಕ್ರಿಸ್ತ್ ಶಿಲುಬೆಗೇರುವ ಮುನ್ನದ 'ಲಾಸ್ಟ್ ಸಪ್ಪರ್'(ಕೊನೆಯ ಭೋಜನ)‌ನ ಸಂಶೋಧನೆಯ ಎಳೆಯ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಡಾನ್ ಬ್ರೌನ್ ಅವರು ಡಾ ವಿಂಚಿ ಕೋಡ್ ಅನ್ನು ಸಿನಿಮಾ ಮಾಡಿ ಜನಪ್ರಿಯಗೊಳಿಸಿದ್ದಾರೆ. ಡಾ ವಿಂಚಿ ಕೋಡ್ ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದಂತೆ ಡಾ ವಿಂಚಿಯ ಹಸ್ತಲಿಖಿತ ಪುಸ್ತಕಗಳನ್ನು ಕೂಡ ಸಂಶೋಧನೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.

ಕಳೆದ ವರ್ಷವಷ್ಟೇ 2012ರಲ್ಲಿ ಜಗತ್ತು ಪ್ರಳಯವಾಗಲಿದೆ ಎಂಬ ಸುದ್ದಿ ಭರ್ಜರಿ ಸುದ್ದಿ ಮಾಡಿತ್ತು. ಆದರೆ ಈ ಬಗ್ಗೆ ಟೇಲರ್ ಎಂಬ ವಿಜ್ಞಾನಿ ಸಮಜಾಯಿಷಿ ನೀಡಿ, ಗ್ವಾಟೆಮಾಲಾ, ಬೆಲಿಜ್, ಎಲ್‌ಸಾಲ್ವಡಾರ್, ಈಕ್ವೆಡಾರ್‌ಗಳನ್ನು ಈ ಯುಕುಟಾನ್ ದ್ವೀಪಕಲ್ಪ ಹೊಂದಿದ್ದು, ಇದು ಮಾಯಾ ಜನರು ನೆಲೆಸಿದ ಸ್ಥಳ. ಇಲ್ಲಿ ದೊರೆತ ಆರನೇ ಟೋರ್ಟುಗೇರೊ ಸ್ಮಾರಕದಲ್ಲಿ 2012ರ ಡಿಸೆಂಬರ್ 21ರಂದು ಜಗತ್ತು ಕೊನೆಗೊಳ್ಳುತ್ತದೆ ಎಂದು ತಿಳಿಸಲಾಗಿತ್ತು.

2012ರ ಡಿಸೆಂಬರ್‌ 21ರ ಬೆಳಿಗ್ಗೆ ಬೆಳಿಗ್ಗೆ 11.11ಕ್ಕೆ ಪ್ರಾಚೀನ ಮಾಯಾ ಕ್ಯಾಲೆಂಡರ್‌ನ 5,125 ವರ್ಷಗಳ ಚಕ್ರ ಕೊನೆಗೊಳ್ಳುತ್ತದೆ. ಈ ಚಕ್ರದ ಅಂತ್ಯವನ್ನೇ ಜಗತ್ತಿನ ಅಂತ್ಯ ಎಂದು ತಪ್ಪಾಗಿ ಪರಿಗಣಿಸಲಾಗಿದೆ. ಈ ದಾಖಲೆಗಳನ್ನು ಭಾಷಾಂತರಿಸಿದಾಗ ಅಂದು ಏನೋ ಒಂದು ಘಟನೆ ನಡೆಯುತ್ತದೆ ಎಂದು ಮಾತ್ರ ತಿಳಿಸಲಾಗಿದೆ ಎಂದು ವಿವರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ