ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾತ್ರಿ 10ರಿಂದ ಬೆಳಿಗ್ಗೆ 7ರವರೆಗೆ ಸೆಕ್ಸ್ ಮಾಡದಂತೆ ಆದೇಶ! (No sex | British couple | London | neighbour's child)
Bookmark and Share Feedback Print
 
ರಾತ್ರಿ 10ರಿಂದ ಬೆಳಿಗ್ಗೆ ಏಳು ಗಂಟೆಯವರೆಗೆ ಲೈಂಗಿಕ ಚಟುವಟಿಕೆ ನಡೆಸಬಾರದು ಎಂದು ಪಕ್ಕದ ಮನೆಯಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಬ್ರಿಟೀಷ್ ದಂಪತಿಗೆ ಆದೇಶ ನೀಡಲಾಗಿದೆ.

ದಂಪತಿಯಿಂದ ತೊಂದರೆಯಾಗುತ್ತಿದೆ ಎಂದು ನೆರೆಮನೆಯ ಮಗುವೊಂದು ತನ್ನ ಶಿಕ್ಷಕರಲ್ಲಿ ದೂರಿಕೊಂಡ ಬಳಿಕ ಸ್ಥಳೀಯ ಆಡಳಿತವು ಲೈಂಗಿಕ ಚಟುವಟಿಕೆ ಮೇಲೆ ಮಿತಿಗಳನ್ನು ಹೇರಿದೆ ಎಂದು 'ದಿ ಸನ್' ಪತ್ರಿಕೆ ಸೋಮವಾರ ವರದಿ ಮಾಡಿದೆ.

ಆದರೆ ಇದಕ್ಕೆ ಅಲನ್ ಮತ್ತು ಫಿಯೋನಾ ಹೇ ದಂಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಸಂಪೂರ್ಣವಾಗಿ ಅಸಂಬಂದ್ಧ ಸೂಚನೆ. ನಾನು ಅಸ್ತಮಾದಿಂದ ಬಳಲುತ್ತಿರುವ ವ್ಯಕ್ತಿಯಾಗಿರುವುದರಿಂದ ನಮ್ಮ ಲೈಂಗಿಕ ಚಟುವಟಿಕೆ ಕೇವಲ ಐದೇ ನಿಮಿಷದಲ್ಲಿ ಅಂತ್ಯಗೊಳ್ಳುತ್ತದೆ. ನನ್ನ ಹೆಂಡತಿಯೂ ದುರ್ಬಲಳು. ಹಾಗಾಗಿ ನಮ್ಮಿಂದ ಯಾರಿಗೂ ತೊಂದರೆಯಾಗಲು ಸಾಧ್ಯವೇ ಇಲ್ಲ ಎಂದು 50ರ ಹರೆಯದ ಅಲನ್ ವಿವರಣೆ ನೀಡಿದ್ದಾರೆ.

ನಮ್ಮ ಚಟುವಟಿಕೆಯಿಂದ ಯಾರಿಗಾದರೂ ತೊಂದರೆಯಾಗುತ್ತದೆ ಎಂಬುವುದನ್ನು ನಾವು ನಂಬುವುದಿಲ್ಲ. ನನ್ನ ಆರೋಗ್ಯ ಪರಿಸ್ಥಿತಿಯ ಕಾರಣದಿಂದಾಗಿ ನಮ್ಮ ನಡುವಿನ ಸೆಕ್ಸ್ ಕೇವಲ ಐದು ಅಥವಾ ಆರು ನಿಮಿಷಗಳಲ್ಲಿ ಮುಗಿಯುತ್ತದೆ. ನಾವೇನು ರಾತ್ರಿಯಿಡೀ ಇದನ್ನೇ ಮಾಡಿಕೊಂಡಿರುವುದಿಲ್ಲ ಎಂದು ಅವರು ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.

ಈ ಬಗ್ಗೆ 43ರ ಹರೆಯದ ಫಿಯೋನಾ ಕೂಡ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ತೀವ್ರ ಕ್ಷುದ್ರಳಾಗಿದ್ದೇನೆ. ಒಬ್ಬ ಪುರುಷ ಮತ್ತು ಆತನ ಪತ್ನಿ ಸಾಧ್ಯವಿರುವ ಹೊರತಾಗಿಯೂ ಸೆಕ್ಸ್ ಮಾಡಕೂಡದು ಎಂದು ಹೇಳುವುದು ಅತಿಯಾಯಿತು. ಟೀವಿ ನೋಡುತ್ತಾ ವಾರಕ್ಕೊಂದೆರಡು ಸಲ ಸೆಕ್ಸ್ ಮಾಡುವುದಷ್ಟೇ ನಮಗಿರುವ ವಿಲಾಸಿ ಜೀವನ. ಇಂತಹ ಸೂಚನೆ ನಿಜಕ್ಕೂ ಅಸಂಬದ್ಧ ಎಂದು ಫಿಯೋನಾ ತಿಳಿಸಿದ್ದಾರೆ.

ವಸತಿ ಅಧಿಕಾರಿಯೊಬ್ಬರು ನಮಗೆ ಈ ಸಂಬಂಧ ಎಚ್ಚರಿಕೆ ಪತ್ರವನ್ನು ನೀಡಿದ್ದಾರೆ. ಒಂದು ವೇಳೆ ರಾತ್ರಿ 10ರಿಂದ ಬೆಳಿಗ್ಗೆ ಏಳರ ನಡುವೆ ಸೆಕ್ಸ್ ನಡೆಸಿ ಸದ್ದು ಮಾಡಿ ಈ ಸಂಬಂಧ ಮತ್ತೆ ದೂರು ಬಂದಲ್ಲಿ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಅಲನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ