ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ಲಾಮಾಬಾದ್; ಅಪಹೃತ ಬ್ರಿಟೀಷ್ ಬಾಲಕನ ಬಿಡುಗಡೆ (Kidnapped British boy | Pakistan | British high commission | Sahil Saeed)
Bookmark and Share Feedback Print
 
ಇದೇ ತಿಂಗಳು ಕುಟುಂಬದೊಂದಿಗೆ ರಜಾದಿನ ಕಳೆಯಲು ಪಾಕಿಸ್ತಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಪಹರಣಕ್ಕೊಳಗಾಗಿದ್ದ ಐದರ ಹರೆಯದ ಬಾಲಕನನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ಲಾಮಾಬಾದ್‌ನಲ್ಲಿನ ಬ್ರಿಟೀಷ್ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.

ದಕ್ಷಿಣ ಇಸ್ಲಾಮಾಬಾದ್‌ನಿಂದ 65 ಕಿಲೋಮೀಟರ್ ದೂರದಲ್ಲಿರುವ ಜೆಲೂಮ್ ಎಂಬಲ್ಲಿನ ಅಜ್ಜಿ ಮನೆಯಿಂದ ಮಾರ್ಚ್ ನಾಲ್ಕರಂದು ಬಾಲಕ ಸಾಹಿಲ್ ಸಯೀದ್‌ನನ್ನು ಅಪಹರಿಸಲಾಗಿತ್ತು.

ಮನೆಯಿಂದ ಚಿನ್ನಾಭರಣ ಮತ್ತು ಹಣವನ್ನೂ ಕದ್ದೊಯ್ದಿದ್ದ ದರೋಡೆಕೋರರು ಬಾಲಕ ಸಯೀದ್‌ನನ್ನು ಅಪಹರಿಸಿದ್ದು, 1,20,000 ಡಾಲರ್ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಕುಟುಂಬ ತಿಳಿಸಿತ್ತು.

ಇದು ಸಂತೋಷದ ಸುದ್ದಿ. ಸಾಹಿಲ್ ಮತ್ತು ಆತನ ಕುಟುಂಬ ಎದುರಿಸುತ್ತಿದ್ದ ಸಂಕಷ್ಟ ಕೊನೆಗೊಂಡಿದೆ ಎಂದು ಬ್ರಿಟೀಷ್ ರಾಯಭಾರ ಕಚೇರಿಯ ರಾಯಭಾರಿ ಆಡಂ ಥಾಮ್ಸನ್ ಹೇಳಿಕೆಯನ್ನು ಅವರ ವಕ್ತಾರರು ಓದಿ ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಬ್ರಿಟನ್ ನಡುವಿನ ಉನ್ನತ ಮಟ್ಟದ ಸಹಕಾರಕ್ಕಾಗಿ ನಾನು ಕೃತಜ್ಞತೆ ಅರ್ಪಿಸುತ್ತಿದ್ದೇನೆ. ಅಲ್ಲದೆ ಸಾಹಿಲ್‌ನನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವಲ್ಲಿ ಭಾರೀ ಪರಿಶ್ರಮವಹಿಸಿದ ಜೆಲೂಮ್ ಪೊಲೀಸರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಬಾಲಕನನ್ನು ಹೇಗೆ, ಯಾವಾಗ, ಎಲ್ಲಿ ಬಿಡುಗಡೆ ಮಾಡಲಾಯಿತು ಅಥವಾ ಬಾಲಕ ಈಗ ಎಲ್ಲಿದ್ದಾನೆ ಮುಂತಾದ ಯಾವುದೇ ಮಾಹಿತಿಗಳನ್ನು ನೀಡಲು ಬ್ರಿಟೀಷ್ ರಾಯಭಾರ ಕಚೇರಿ ನಿರಾಕರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ