ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟೀ-ಶರ್ಟ್ ಬರಹಕ್ಕೆ ಆಕ್ಷೇಪ; ಕ್ಷಮೆ ಯಾಚಿಸಿದ ಏರ್‌ಪೋರ್ಟ್ (Freedom or die | Gatwick Airport | T-shirt | Lloyd Berks)
Bookmark and Share Feedback Print
 
'ಫ್ರೀಡಂ ಆರ್ ಡೈ' ಎಂಬ ಬರಹ ಬೆದರಿಕೆಯಂತೆ ಕಾಣುತ್ತಿದೆ ಎಂದು ಹೇಳಿ ಟೀ-ಶರ್ಟನ್ನು ಒಳಗೆ-ಹೊರಗೆ ಮಾಡಿಕೊಂಡು ಹಾಕಿ ಎಂದು ಪ್ರಯಾಣಿಕರೊಬ್ಬರಿಗೆ ಸೂಚಿಸಿದ್ದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣವು ಇದೀಗ ಕ್ಷಮೆ ಯಾಚಿಸಿದೆ.

38ರ ಹರೆಯದ ಲಾಯ್ಡ್ ಬರ್ಕ್ಸ್ ಎಂಬ ವ್ಯಕ್ತಿ ಆಸ್ಟ್ರಿಯಾಕ್ಕೆ ಕುಟುಂಬದೊಂದಿಗೆ ರಜಾದಿನ ಕಳೆಯಲೆಂದು ಹೊರಟಿದ್ದ ಸಂದರ್ಭದಲ್ಲಿ ಅವರನ್ನು ಭದ್ರತಾ ಅಧಿಕಾರಿಗಳು ತಡೆದಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ.

ನಾನು ಲೋಹ ಪರಿಶೋಧಕದೊಳಗೆ ಹೋಗುವ ಸಂದರ್ಭದಲ್ಲಿ ಮೊದಲು ನನ್ನ ಜತೆಗಿದ್ದ ಪರಿಕರಗಳನ್ನು ಕೆಳಗಿಳಿಸುವಂತೆ ಸೂಚಿಸಲಾಯಿತು. ಬಳಿಕ ಕೈ ಚೀಲವನ್ನೂ ತೆಗೆಯಿರಿ ಎಂದರು. ಆ ಮೇಲೆ ನನ್ನ ಬಳಿ ಬಂದ ಅಧಿಕಾರಿಯೊಬ್ಬರು ಪರಿಶೀಲನೆ ನಡೆಸಿ ಟೀ-ಶರ್ಟನ್ನು ತಿರುಗು-ಮುರುಗು ಮಾಡಿ ಹಾಕಿಕೊಳ್ಳುವಂತೆ ಸೂಚಿಸಿದರು ಎಂದು ಲಾಯ್ಡ್ ತಿಳಿಸಿದ್ದಾರೆ.

ನೀವು ಹಾಕಿಕೊಂಡಿರುವ ಟೀ-ಶರ್ಟಿನಲ್ಲಿ ಹೊಂದಿರುವ ಬರಹವು ಕೆಲವು ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆಯಂತಿದೆ ಎಂದು ಅಧಿಕಾರಿ ಹೇಳಿದಾಗ ಆರಂಭದಲ್ಲಿ ಇದು ಜೋಕ್ ಇರಬಹುದು ಎಂದು ಭಾವಿಸಿದ್ದೆ. ಹಸಿರು ನೀಲಿ ಮತ್ತು ಬಿಳಿ ಬಣ್ಣದ ಟೀ-ಶರ್ಟ್ ವಿನ್ಯಾಸ ಹೊರತುಪಡಿಸಿ ವಿಶೇಷವೇನೂ ಇರಲಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.

ಆದರೆ ಅಧಿಕಾರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಾನು ಟೀ-ಶರ್ಟ್ ಬದಲಾಯಿಸದೆ, ಅದರ ಮೇಲೆ ಸ್ವೆಟರ್ ಹಾಕಿಕೊಂಡು ಮುಚ್ಚಬಹುದೇ ಎಂದಾಗ ಅಧಿಕಾರಿ ಒಪ್ಪಿಗೆ ಸೂಚಿಸಿದ್ದರು ಎಂದು ಲಾಯ್ಡ್ ತಿಳಿಸಿದ್ದಾರೆ.

ಈ ಘಟನೆಯಿಂದ ತೀವ್ರ ಟೀಕೆಗೆ ಒಳಗಾಗಿದ್ದ ವಿಮಾನ ನಿಲ್ದಾಣವು ಇದೀಗ ಕ್ಷಮೆ ಯಾಚಿಸಿದೆ. ಟೀ-ಶರ್ಟ್ ಬರಹಕ್ಕೆ ಸಂಬಂಧ ಪಟ್ಟಂತೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ