ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೈಜೀರಿಯಾ ಭಯೋತ್ಪಾದಕರಿಂದ ಮತ್ತಷ್ಟು ದಾಳಿ ಬೆದರಿಕೆ (Nigerian militants | attacks | militant group | MEND)
Bookmark and Share Feedback Print
 
ನೈಜೀರಿಯಾದ ತೈಲನಗರ ವಾರಿಯಲ್ಲಿ ಇತ್ತೀಚೆಗಷ್ಟೇ ಎರಡು ಕಾರ್ ಬಾಂಬ್ ಸ್ಫೋಟಗೊಳಿಸಿದ್ದ ಭಯೋತ್ಪಾದಕ ಸಂಘಟನೆಯೊಂದು ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ.

ಡೆಲ್ಟಾ ಪ್ರಾಂತ್ಯದ ಸಂಪನ್ಮೂಲದ ನಿಯಂತ್ರಣ ಪಡೆದುಕೊಳ್ಳಲು ಹೋರಾಟ ನಡೆಸುತ್ತಿರುವ ಬಂಡುಕೋರರ ಗುಂಪಿನ ಒಂದು ಭಾಗವಾಗಿರುವ 'ದಿ ಮೂಮೆಂಟ್ ಫಾರ್ ದಿ ಇಮಾನ್ಸಿಪೇಷನ್ ಆಫ್ ದಿ ನೈಜರ್ ಡೆಲ್ಟಾ' ಎಂಬ ಭಯೋತ್ಪಾದಕರ ಸಂಘಟನೆ ಈ ಬೆದರಿಕೆಯನ್ನು ಹಾಕಿದೆ.

ನಾವು ಉದ್ದೇಶಿಸಿದ್ದ ಮೂರನೇ ಮತ್ತು ಅತೀ ಪ್ರಬಲ ಬಾಂಬ್ ಸ್ಫೋಟಗೊಳ್ಳಲು ವಿಫಲವಾಯಿತು. ಆದರೆ ಮುಂದಿನ ದಿನಗಳ ದಾಳಿಗಳಿಗೆ ಅದನ್ನು ಬಳಸಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ನಾವು ಗುರಿ ಮಾಡಿದ್ದ ಕೊನೆಯ ಬಾಂಬ್ ಇಟ್ಟ ಉತ್ಸವ ಸ್ಥಳದಿಂದ ಜನ ದೂರ ಓಡಿ ಹೋಗಿದ್ದಾರೆ ಎಂಬುದನ್ನು ನಮ್ಮ ಸಂಘಟನೆಯವರು ಮೊದಲೇ ತಿಳಿಸಿದ ಕಾರಣ ಶಕ್ತಿಯುತವಾಗಿದ್ದ ಮೂರನೇ ಬಾಂಬನ್ನು ಸ್ಫೋಟಿಸುವುದು ಅನಗತ್ಯ ಎಂದು ನಾವು ಹಿಂದಕ್ಕೆ ಸರಿದಿದ್ದೆವು ಎಂದು ಸಂಘಟನೆ ತಿಳಿಸಿದೆ.

ಈ ಬಾಂಬ್ ಸ್ಫೋಟಗೊಳ್ಳುತ್ತಿದ್ದರೆ ಭಾರೀ ನಷ್ಟ ಸಂಭವಿಸುತ್ತಿತ್ತು. ಇದನ್ನು ನಾವು ಮುಂದಿನ ದಿನಗಳ ಕೃತ್ಯಗಳಿಗೆ ಬಳಸಿಕೊಳ್ಳುತ್ತೇವೆ ಎಂದಿರುವ ಭಯೋತ್ಪಾದಕರು, ಮುಂದಿನ ದಾಳಿ ಎಲ್ಲಿ ನಡೆಸಲಾಗುತ್ತದೆ ಅಥವಾ ಮೂರನೇ ಬಾಂಬನ್ನು ಎಲ್ಲಿ ಸ್ಪೋಟಗೊಳಿಸಲು ಯತ್ನಿಸಲಾಗಿತ್ತು, ಯಾವಾಗ ಅದನ್ನು ರದ್ದುಪಡಿಸಲಾಯಿತು ಎಂಬುದನ್ನು ತಿಳಿಸಿಲ್ಲ.

ತೈಲ ಶ್ರೀಮಂತ ಪ್ರಾಂತ್ಯ ಡೆಲ್ಟಾದ ಸಂಪನ್ಮೂಲ ನಿಯಂತ್ರಣಕ್ಕಾಗಿ ಹೋರಾಡುತ್ತಿದ್ದ ಮಾಜಿ ಬಂಡುಕೋರರಿಗೆ ಕ್ಷಮಾದಾನ ನೀಡುವ ಸಂಬಂಧ ಮಾತುಕತೆ ಆಗಮಿಸಿದ್ದ ಅಧಿಕಾರಿಗಳಿದ್ದ ಸ್ಥಳದಲ್ಲಿ ಭಯೋತ್ಪಾದಕರು ಎರಡು ಕಾರ್ ಬಾಂಬ್‌ ಸ್ಫೋಟಗೊಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ