ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಅಮೆರಿಕ ಡ್ರೋನ್ ದಾಳಿಗೆ 11 ಉಗ್ರರು ಬಲಿ (North Waziristan | Taliban | al-Qaida | terrorists | Pakistan)
Bookmark and Share Feedback Print
 
ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಹಾಗೂ ಅಲ್ ಖಾಯಿದಾ ಉಗ್ರರ ಬೆಂಬಲಿತ ಅಡಗುತಾಣಗಳ ಮೇಲೆ ಅಮೆರಿಕದ ಮಾನವರಹಿತ ಡ್ರೋನ್‌ನ ಮಿಸೈಲ್ ದಾಳಿಯಲ್ಲಿ 11ಮಂದಿ ಶಂಕಿತ ಉಗ್ರರು ಹತರಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ಡಗಾಡುಗಳಿಂದ ಸುತ್ತುವರಿಯಲ್ಪಟ್ಟ ಉತ್ತರ ವಜಿರಿಸ್ತಾನದ ಡಾಟ್ಟಾ ಖೇಲ್ ಪ್ರದೇಶ ಸಮೀಪದ ಮಿರಾಂಶಾ ಹೆಡ್ ಕ್ವಾರ್ಟರ್‌ನ ಬಳಿಯಿರುವ ಉಗ್ರರ ಅಡಗುತಾಣದ ಮೇಲೆ ಮಿಸೈಲ್ ದಾಳಿ ನಡೆದಿದ್ದು, ಇದರಲ್ಲಿ ಉಗ್ರರ ಎರಡು ಅಡಗುತಾಣ ಧ್ವಂಸಗೊಂಡಿರುವುದಾಗಿ ಮೂಲಗಳು ಹೇಳಿವೆ.

ಅಮೆರಿಕದ ಡ್ರೋನ್ ನಾಲ್ಕು ಮಿಸೈಲ್ ಹಾರಿಸಿದ್ದು, ದಾಳಿಯಲ್ಲಿ 11ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಬಹುತೇಕ ವಿದೇಶಿಯರೇ ಬಲಿಯಾಗಿರುವುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

ಉತ್ತರ ವಜಿರಿಸ್ತಾನ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ತಾಲಿಬಾನ್ ಮುಖಂಡ ಹಫೀಜ್ ಗುಲ್ ಬಹದೂರ್ ಹುಟ್ಟೂರಾಗಿದ್ದು, ಆತ ಅಫ್ಘಾನಿಸ್ತಾನದಲ್ಲಿನ ಅಮೆರಿಕ ಮತ್ತು ನ್ಯಾಟೋ ಪಡೆಗಳ ವಿರುದ್ಧ ಹೋರಾಡುತ್ತಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ