ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೆನಿಜುವೆಲಾ ಟಿವಿ ನ್ಯೂಸ್ ಚೀಫ್ ಅಪಹರಣ (Venezuelan | TV news | kidnapped | Carlos Roca | Odalis Caldera)
Bookmark and Share Feedback Print
 
ವೆನಿಜುವೆಲಾದ ಈಶಾನ್ಯ ಭಾಗದ ಜುಲಿಯಾ ನಗರದಿಂದ ಟೆಲಿವಿಸಾ ಡೆ ಜುಲಿಯಾ ಖಾಸಗಿ ಟೆಲಿವಿಷನ್ ಚಾನೆಲ್‌ನ ಸುದ್ದಿ ವಿಭಾಗದ ಮುಖ್ಯಸ್ಥ ಕಾರ್ಲೋಸ್ ರೋಕಾ ಅವರನ್ನು ಶಸ್ತ್ರ ಸಜ್ಜಿತ ವ್ಯಕ್ತಿಯೊಬ್ಬ ಅಪಹರಿಸಿಕೊಂಡು ಹೋಗಿರುವ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಟಿವಿ ಸ್ಟುಡಿಯೋದ ಪ್ರವೇಶ ದ್ವಾರದ ಸಮೀಪದಲ್ಲಿಯೇ ಅಪಹರಣ ಕೃತ್ಯ ನಡೆದಿರುವುದಾಗಿ ಚಾನೆಲ್‌ನ ಓಡಾಲಿಸ್ ಕಾಲ್‌ಡೆರಾ ಗ್ಲೋಬೋವಿಷನ್ ಟೆಲಿವಿಷನ್‌ಗೆ ವಿವರಿಸಿದ್ದಾರೆ.

ಆದರೆ ಕಾರ್ಲೋಸ್ ರೋಕಾ ಅವರನ್ನು ರಾಜಕೀಯ ಪ್ರೇರಿತವಾಗಿ ಅಪಹರಿಸಲಾಗಿದೆಯೇ ಅಥವಾ ಕ್ರಿಮಿನಲ್ ಹಿನ್ನೆಲೆಯಲ್ಲಿ ಅಪಹರಣ ನಡೆಸಿದ್ದಾರೆಯೇ ಎಂಬು ಮಾಹಿತಿ ಇನ್ನಷ್ಟೇ ಖಚಿತವಾಗಬೇಕಾಗಿದೆ ಎಂದು ಜುಲಿಯಾ ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾರ್ಲೋಸ್ ಅವರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಅಪಹರಣಕಾರರಿಂದ ಈವರೆಗೂ ಯಾವುದೇ ಬೇಡಿಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ