ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಉಗ್ರರ ದಮನ ತುಂಬಾ ಕಠಿಣ: ಮುಷರ್ರಫ್ (Taliban | Pakistan | Musharraf | Barack Obama | Afghanistan)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ತಳವೂರಿರುವ ತಾಲಿಬಾನ್ ಉಗ್ರರನ್ನು ಅಷ್ಟು ಸುಲಭವಾಗಿ ದಮನ ಮಾಡಲು ಕಷ್ಟ ಎಂದಿರುವ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್, ಆ ನಿಟ್ಟಿನಲ್ಲಿ ಇನ್ನು ಒಂದು ವರ್ಷದೊಳಗೆ ಅಮೆರಿಕದ ಮಿಲಿಟರಿ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ನಿರ್ಧಾರ ಸಮಂಜಸವಾದುದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಲಿಬಾನ್ ಉಗ್ರರನ್ನು ಮಟ್ಟಹಾಕುವುದೇ ಕಠಿಣವಾಗಿರುವ ಸಂದರ್ಭದಲ್ಲಿ ಒಂದು ವರ್ಷದಲ್ಲಿ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಮಿಲಿಟರಿ ಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗುವುದು ಎಂಬ ನಿರ್ಧಾರಕ್ಕೆ ಸಂಬಂಧಿಸಿದಂತೆ ಮುಷ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಅಲ್ಲಿದ್ದರೆ ಮಾತ್ರ ಆ ಪ್ರದೇಶ ಮತ್ತು ಜಾಗತಿಕವಾಗಿ ಉಗ್ರರ ಅಟ್ಟಹಾಸವನ್ನು ಮಟ್ಟಹಾಕುವುದು ಎಷ್ಟು ಕಷ್ಟಸಾಧ್ಯ ಎಂಬುದರ ಅರಿವಾಗುತ್ತದೆ ಎಂಬುದಾಗಿ ಅಮೆರಿಕದಲ್ಲಿ ಉಪನ್ಯಾಸಕರಾಗಿ ಪ್ರವಾಸದಲ್ಲಿರುವ ಮುಷ್, ಕಳೆದ ರಾತ್ರಿ ಓರೆಗಾನ್‌ನ ಪೋರ್ಟ್‌ಲ್ಯಾಂಡ್ ಯೂನಿವರ್ಸಿಟಿಯಲ್ಲಿ ನೆರೆದ ಕೂಟವನ್ನು ಉದ್ದೇಶಿಸಿ ಮಾತನಾಡಿದರು.

ಹಾಗಾಗಿ ಬರಾಕ್ ಒಬಾಮ ಅವರು ಅಫ್ಘಾನಿಸ್ತಾನಕ್ಕೆ ಇನ್ನೂ 30ಸಾವಿರ ಮಿಲಿಟರಿ ಯೋಧರನ್ನು ಕಳುಹಿಸಬೇಕು ಎಂದು ಒತ್ತಾಯಿಸಿರುವ ಅವರು, ಹಾಗಾದಲ್ಲಿ ಮಾತ್ರ ಉಗ್ರರ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಬಹುದು ಎಂದು ತಿಳಿಸಿದ್ದಾರೆ.

ಆದರೆ 2011ರ ಜುಲೈನೊಳಗೆ ಅಫ್ಘಾನಿಸ್ತಾನದಿಂದ ಮಿಲಿಟರಿ ಪಡೆಯನ್ನು ವಾಪಸು ಕರೆಯಿಸಿಕೊಳ್ಳಲು ಆರಂಭಿಸಲಾಗುವುದು ಎಂಬ ಬರಾಕ್ ಒಬಾಮ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿ, ತಾಲಿಬಾನ್ ಉಗ್ರರನ್ನು ಮಟ್ಟಹಾಕುವವರೆಗೂ ಹೋರಾಟ ಮುಂದುವರಿಯಬೇಕು ಎಂದು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ