ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಭಯೋತ್ಪಾದಕ ಲಾಡೆನ್ ಜೀವಂತ ಸೆರೆ ಅಮೆರಿಕಾಕ್ಕೆ ಅಸಾಧ್ಯ' (Osama bin Laden | Al-Qaida | United States | Eric Holder)
Bookmark and Share Feedback Print
 
ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅಮೆರಿಕಾದ ವಿಚಾರಣೆಯನ್ನು ಎದುರಿಸುವುದಿಲ್ಲ. ಯಾಕೆಂದರೆ ಆತನನ್ನು ಜೀವಂತವಾಗಿ ಸೆರೆ ಹಿಡಿಯುವುದು ಸಾಧ್ಯವಾಗುವುದಿಲ್ಲ ಎಂದು ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಶಾಸಕಾಂಗಕ್ಕೆ ತಿಳಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಸದಸ್ಯರೊಂದಿಗೆ ವಾಗ್ವಾದವನ್ನೇ ನಡೆಸಿದ ಹೋಲ್ಡರ್, 'ಅಮೆರಿಕಾದ ನಂಬರ್ ವನ್ ವೈರಿ ಒಸಾಮಾ ಬಿನ್ ಲಾಡೆನ್‌ನನ್ನು ಸೆರೆ ಹಿಡಿಯುವ ಬದಲು ಆತನ ಶವಕ್ಕೆ ಎಚ್ಚರಿಕೆ ನೀಡುವುದನ್ನು ಓದಲಿದ್ದೇವೆ' ಎಂದರು.

ವಾಸ್ತವತೆಯೊಂದಿಗೆ ವ್ಯವಹಾರವನ್ನು ಆರಂಭಿಸಿ ಎಂದ ಆಟಾರ್ನಿ ಜನರಲ್, ಲಾಡೆನ್ ಯಾವತ್ತೂ ಅಮೆರಿಕಾದ ನ್ಯಾಯಾಲಯದಲ್ಲಿ ಕಾಣಿಸಿಕೊಳ್ಳಲಾರ ಎಂದರು.

ಅಟಾರ್ನಿ ಜನರಲ್ ಅವರು ಪ್ರಸ್ತಾಪಿಸಿದಂತೆ ಶಂಕಿತ ಭಯೋತ್ಪಾದಕರನ್ನು ಅಮೆರಿಕಾ ಕೇಂದ್ರೀಯ ನಾಗರಿಕ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಿಸುವುದು ಅಮೆರಿಕನ್ನರಿಗೆ ಬೆದರಿಕೆಯಾಗಿ ಪರಿಣಮಿಸಬಹುದು ಎಂದು ಉತ್ತರಿಸಿದ ರಿಪಬ್ಲಿಕನ್ ಟೀಕೆಗೆ ಹೋಲ್ಡರ್ ಕಿಡಿಕಾರುತ್ತಾ ಈ ರೀತಿ ಉತ್ತರಿಸಿದರು.

ಒಬ್ಬ ಅಮೆರಿಕಾದ ಕುಖ್ಯಾತ ಕ್ರಿಮಿನಲ್ ಅಥವಾ ಸಮೂಹ ಹತ್ಯೆ ನಡೆಸಿದ ಇತರ ಕ್ರಿಮಿನಲ್‌ಗಳಂತೆ ಭಯೋತ್ಪಾದಕರು ಕೂಡ ಅದೇ ರೀತಿಯ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೌಸ್ ಅಪ್ರಾಪ್ರಿಯೇಷನ್ಸ್ ಉಪ ಸಮಿತಿ ವಿಚಾರಣೆ ಸಂದರ್ಭದಲ್ಲಿ ಹೋಲ್ಡರ್ ತಿಳಿಸಿದರು.

ನಾಗರಿಕ ನ್ಯಾಯಾಲಯದಲ್ಲಿ ಆರೋಪಿಯನ್ನು ಅನುಚಿತವಾಗಿ ಅಥವಾ ವಿಶೇಷವಾಗಿ ಉಪಚರಿಸುವುದು ಅಥವಾ ಹೇಗೋ ಒಂದು ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಸತ್ಯ ಮತ್ತು ಸಾಮಾನ್ಯ ಭಾವನೆ. ಈ ಆರೋಪಿಗಳನ್ನು ಕೂಡ ಇತರ ಕೊಲೆ ಆರೋಪಿಗಳಂತೆ ಮಾತ್ರ ನಡೆಸಿಕೊಳ್ಳಬೇಕು ಎಂದು ಹೋಲ್ಡರ್ ಅಭಿಪ್ರಾಯಪಟ್ಟರು.

ಇದಕ್ಕೆ ರಿಪಬ್ಲಿಕನ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಅವರು ಕ್ಷುದ್ರಗೊಂಡು, ನಿಮಗೆ ಲಾಡೆನ್‌ನನ್ನು ಜೀವಂತವಾಗಿ ಸೆರೆ ಹಿಡಿಯುವುದು ಸಾಧ್ಯವೇ ಇಲ್ಲ ಎಂಬಂತೆ ಸವಾಲು ಹಾಕಿದರು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ