ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೊನ್ಸೇಕಾ ಕೋರ್ಟ್ ಮಾರ್ಷಲ್ ಮುಂದೂಡಿದ ಶ್ರೀಲಂಕಾ (Sri Lanka | court-martial | Sarath Fonseka | Mahinda Rajapaksa)
Bookmark and Share Feedback Print
 
ಶ್ರೀಲಂಕಾ ಮಿಲಿಟರಿ ಮಾಜಿ ಮುಖ್ಯಸ್ಥ ಶರತ್ ಫೊನ್ಸೇಕಾ ವಿರುದ್ಧದ ನ್ಯಾಯಾಧೀಶರ ಉಪಸ್ಥಿತಿಯಲ್ಲಿ ನಡೆಯುವ ಕೋರ್ಟ್ ಮಾರ್ಷಲ್ ಪ್ರಕ್ರಿಯೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ರಕ್ಷಣಾ ಅಟಾರ್ನಿ ಬುಧವಾರ ತಿಳಿಸಿದ್ದಾರೆ.

ಎಲ್‌ಟಿಟಿಇ ವಿರುದ್ಧದ ದಶಕಗಳ ಕಾಲದ ಆಂತರಿಕ ಯುದ್ಧದಲ್ಲಿ ಶ್ರೀಲಂಕಾವನ್ನು ಮುನ್ನಡೆಸಿದ್ದ ಫೊನ್ಸೇಕಾ ಬಳಿಕ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹೀಂದ್ರಾ ರಾಜಪಕ್ಷೆಯವರೆದುರು ಗೆಲುವು ಸಾಧಿಸಲು ವಿಫಲರಾಗಿದ್ದರು.

ಆದರೆ ಅವರು ಮಿಲಿಟರಿಯಿಂದ ಕಳೆದ ವರ್ಷ ನಿವೃತ್ತರಾಗುವ ಮೊದಲೇ ಅಧ್ಯಕ್ಷ ರಾಜಪಕ್ಷೆ ಮತ್ತು ಅವರ ಕುಟುಂಬಿಕರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದ್ದು, ಕೋರ್ಟ್ ಮಾರ್ಷಲ್‌ಗೆ ಒಳಪಡಿಸುವ ನಿರ್ಧಾರಕ್ಕೆ ಸರಕಾರ ಬಂದಿತ್ತು.

ಮಂಗಳವಾರ ಆರಂಭವಾಗಿದ್ದ ಫೊನ್ಸೇಕಾ ವಿರುದ್ಧದ ಕೋರ್ಟ್ ಮಾರ್ಷಲ್‌ ವರದಿಗೆ ಪತ್ರಕರ್ತರಿಗೆ ಅವಕಾಶ ನೀಡಲಾಗಿರಲಿಲ್ಲ. ಆದರೆ ಬುಧವಾರ ಮೂವರು ಮಿಲಿಟರಿ ಅಧಿಕಾರಿಗಳ ಸಮಿತಿಯು ವಿಚಾರಣೆಯನ್ನು ಮುಂದೂಡಿದ್ದು, ಫೊನ್ಸೇಕಾ ಮೇಲಿನ ಎರಡನೇ ಆರೋಪವನ್ನು ವಿಚಾರಣೆ ನಡೆಸಲು ಹೊಸ ಸಮಿತಿಯನ್ನು ರಚನೆಗೊಳಿಸಲಾಗುತ್ತದೆಯೇ ಎಂದು ರಾಜಪಕ್ಷೆಯವರನ್ನು ಕೇಳಿಕೊಳ್ಳಲಿದೆ ಎಂದು ರಕ್ಷಣಾ ಅಟಾರ್ನಿ ನುವಾನ್ ಬೋಪಗೆ ತಿಳಿಸಿದ್ದಾರೆ.

ಅಧಿಕಾರಿಗಳು ತಮ್ಮ ನಿರ್ಧಾರಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಮಿಲಿಟರಿ ವಕ್ತಾರ ಮೇಜರ್ ಜನರಲ್ ಪ್ರಸಾದ್ ಸಮರಸಿಂಘೆ, ಬುಧವಾರದ ವಿಚಾರಣಾ ಪ್ರಕ್ರಿಯೆಗಳ ಕುರಿತು ಯಾವುದೇ ವಿವರಗಳನ್ನು ತಾನು ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.

ಫೊನ್ಸೇಕಾ ಮೇಲಿರುವ ಮೊದಲ ಆರೋಪ ಅಧಿಕಾರದಲ್ಲಿದ್ದಾಗಲೇ ಅಧ್ಯಕ್ಷರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದು. ಎರಡನೇ ಆರೋಪ ನಿಯಮಗಳನ್ನು ಉಲ್ಲಂಘಿಸಿ ಮಿಲಿಟರಿ ಪರಿಕರಗಳನ್ನು ಖರೀದಿಸಿದ್ದು. ಎರಡನೇ ಆರೋಪದ ಕುರಿತು ಸಮಸ್ಯೆಗಳು ಉದ್ಭವವಾಗಿರುವ ಹಿನ್ನೆಲೆಯಲ್ಲಿ ಕೋರ್ಟ್ ಮಾರ್ಷಲ್ ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ