ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಲಾಹೋರ್‌ನಲ್ಲಿ 3ಟನ್‌ ಸ್ಫೋಟಕ ವಶ (Pakistan | Lahore | explosives | terrorists | Iqbal Town)
Bookmark and Share Feedback Print
 
ಪೂರ್ವ ಪಾಕಿಸ್ತಾನ ನಗರದಲ್ಲಿ ಸುಮಾರು ಮೂರು ಟನ್‌ಗಳಷ್ಟು ಪ್ರಮಾಣದಲ್ಲಿ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪಾಕಿಸ್ತಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾಹದತ್ ರಸ್ತೆ ಸಮೀಪದ ಮೂನ್ ಮಾರ್ಕೆಟ್ ಸಮೀಪದ ಅಂಗಡಿಯೊಂದರಲ್ಲಿ ಸುಮಾರು 3ಸಾವಿರ ಕೆಜಿ ಸ್ಫೋಟಕ, ಮೂರು ಸೂಸೈಡ್ ಜಾಕೆಟ್, ನಾಲ್ಕು ಗ್ರೆನೇಡ್ಸ್ ಹಾಗೂ ನಾಲ್ಕು ಲಘ ಸ್ವಯಂಚಾಲಿತ ಗನ್‌ಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಸಾರ್‌ವಾರ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.

ಲಾಹೋರ್‌ನ ಇಕ್ಬಾಲ್ ನಗರ ಪ್ರದೇಶದಲ್ಲಿ ಈ ಸ್ಫೋಟಕಗಳನ್ನು ಅಂಗಡಿಯೊಂದರಲ್ಲಿ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಇಕ್ಬಾಲ್ ನಗರದಲ್ಲಿ ಉಗ್ರರು ನಡೆಸಿದ ಸರಣಿ ಸ್ಫೋಟದಲ್ಲಿ ಇದೇ ಮಾದರಿಯ ಸ್ಫೋಟಕಗಳನ್ನು ಉಪಯೋಗಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ನಾಸಿರ್ ರಿಜ್ವಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ