ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಟಲಿ: ಫೇಸ್‌ಬುಕ್ ಬಳಸಿ ಸಿಕ್ಕಿಬಿದ್ದ ಮಾಫಿಯಾ ಒಡೆಯ! (Isola Capo Rizzuto | Facebook | Italian mafia | Manfredi)
Bookmark and Share Feedback Print
 
ಸಾಮಾಜಿಕ ಸಂಪರ್ಕ ತಾಣವಾದ ಫೇಸ್‌ಬುಕ್ ಬಳಸಿದ ಪರಿಣಾಮ, ಇಟಲಿಯ ಮೋಸ್ಟ್ ವಾಂಟೆಡ್ ಮಾಫಿಯಾ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿರುವುದಾಗಿ ತಿಳಿಸಿದ್ದಾರೆ.

ಬಂಧಿತನನ್ನು ಪಾಸ್‌ಕ್ವೆಲೆ ಮ್ಯಾನ್‌ಪ್ರೆಡಿ ಎಂದು ಗುರುತಿಸಲಾಗಿದೆ. ಈತ ಫೇಸ್‌ಬುಕ್ ಬಳಸಿರುವುದೇ ಕುತ್ತಿಗೆಗೆ ಉರುಳಾಗಿ ಪರಿಣಮಿಸಿದೆ. ಮ್ಯಾನ್‌ಪ್ರೆಡಿ ಪ್ರಿಪೇಯ್ಡ್ ಪೆನ್ ಡ್ರೈವ್ ಉಪಯೋಗಿಸಿ ಫೇಸ್ ಬುಕ್ ಬಳಸಿದ್ದ, ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಆತನನ್ನು ದಕ್ಷಿಣ ಕೆರೆಬಿಯನ್ ನಗರದ ಐಸೋಲಾ ಕಾಪೋ ರಿಜ್ಜುಟೋನಲ್ಲಿ ಬಂಧಿಸಿದ್ದಾರೆ.

ಮ್ಯಾನ್‌ಪ್ರೆಡಿ 33ರ ಹರೆಯದವನಾಗಿದ್ದು, ದೇಶದ ನೂರು ಮಂದಿ ಮೋಸ್ಟ್ ಡೇಂಜರಸ್ ಪಟ್ಟಿಯಲ್ಲಿ ಈತನೂ ಒಬ್ಬನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಖಚಿತ ಮಾಹಿತಿಯನ್ನು ಕಲೆ ಹಾಕಿದ ನಂತರ ಪೊಲೀಸರು ಐಸೋಲಾ ಕಾಪೋವಿನಲ್ಲಿರುವ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ್ದರು, ಈ ಸಂದರ್ಭದಲ್ಲಿ ಮಹಡಿ ಮೇಲಿನಿಂದಲೇ ಪರಾರಿಯಾಗಲು ಯತ್ನಿಸಿದ್ದ, ನಂತರ ಆತ ಪೊಲೀಸರಿಗೆ ಶರಣಾಗಿದ್ದ. ಈತ ಕೊಲೆ, ಶಸ್ತ್ರಾಸ್ತ್ರ ಸಾಗಾಟ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಸಂಬಂಧಿತ ಮಾಹಿತಿ ಹುಡುಕಿ