ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಮೂಲದ ಬ್ರಿಟನ್‌ ಸಂಸದನ ಸಾವು (UK | India-born | Ashok Kumar | LONDON | Lord Swraj Paul)
Bookmark and Share Feedback Print
 
ಭಾರತೀಯ ಮೂಲದ ಲೇಬರ್ ಪಕ್ಷದ ಸಂಸದ ಅಶೋಕ್ ಕುಮಾರ್ ಅವರು ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕುಮಾರ್ (53) ಅವರು ಹೋರಾಟಗಾರ ಹಾಗೂ ಇಂಗ್ಲೆಂಡ್‌ನಲ್ಲಿ ಕಮ್ಯುನಿಟಿ ಮುಖಂಡರಾಗಿ ಜನಾನುರಾಗಿಯಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಕಸ್ಮಿಕವಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕುಮಾರ್ ಅವರು ಇಂಗ್ಲೆಂಡ್‌ನ ಈಶಾನ್ಯ ಕ್ಷೇತ್ರದಲ್ಲಿನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು. 1956ರಲ್ಲಿ ಭಾರತದಲ್ಲಿ ಜನಿಸಿದ ಅಶೋಕ್ ಕುಮಾರ್ 1997ರಿಂದ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಕ್ಷದ ನಿಷ್ಠಾವಂತ ಬೆಂಬಲಿಗ, ಅದ್ಭುತ ಸಂಸದ ಎಂದು ಅನಿವಾಸಿ ಭಾರತೀಯ ಕೈಗಾರಿಕೋದ್ಯಮಿ ಲಾರ್ಡ್ ಸ್ವರಾಜ್ ಪೌಲ್ ಬಣ್ಣಿಸಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ಕೂಡ ಮುಂದುವರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ