ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸರತ್ ಫೋನ್ಸೆಕಾ ದೊಡ್ಡ ಮೂರ್ಖ: ರಾಜಪಕ್ಸೆ ಕಿಡಿ (Fonseka | Rajapaksa | Colombo | Kuala Lumpur | Presidential Election)
Bookmark and Share Feedback Print
 
ಶ್ರೀಲಂಕಾ ಮಿಲಿಟರಿ ಪಡೆಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಒಬ್ಬ ಮೂರ್ಖ ಎಂದು ಕಿಡಿಕಾರಿರುವ ಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಸೆ, ಆ ನಿಟ್ಟಿನಲ್ಲಿ ಆತನಿಗೆ ಶೀಘ್ರವೇ ಕ್ಷಮಾದಾನದ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.

ಲಂಕಾ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ದೇಶದಲ್ಲಿ ಮಿಲಿಟರಿ ಆಡಳಿತ ತರುವ ಹಾಗೂ ಮಹೀಂದ ರಾಜಪಕ್ಸೆ ಅವರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಫೋನ್ಸೆಕಾ ಅವರನ್ನು ಬಂಧಿಸಲಾಗಿತ್ತು. ಇದೀಗ ಫೋನ್ಸೆಕಾ ವಿರುದ್ಧ ಕೋರ್ಟ್ ಮಾರ್ಷಲ್ ಆರಂಭಗೊಂಡಿದೆ.

'ಆತನೊಬ್ಬ ಮೂರ್ಖ, 2009ರ ನವೆಂಬರ್ 16ರಂದು (ಕೊಲೊಂಬೊದ ಅಧ್ಯಕ್ಷರ ಕಚೇರಿ) ನನ್ನ ಬಲಭಾಗದಲ್ಲಿಯೇ ಫೋನ್ಸೆಕಾ ಕುಳಿತಿದ್ದರು. ಆ ಸಂದರ್ಭದಲ್ಲಿ, ನಿಮಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇದೆಯೇ ಎಂದು ಕೇಳಿದ್ದೆ. ಅದಕ್ಕೆ ಅವರು ಇಲ್ಲ, ಇಲ್ಲ, ನನ್ನ ಮನಸ್ಸು ಅದಕ್ಕೆ ಸಿದ್ದವಾಗಿಲ್ಲ ಎಂದಿದ್ದರು. ಅದೇ ಆ ವ್ಯಕ್ತಿಯ ಕೊನೆಯ ಭೇಟಿ, ನಂತರ ನನ್ನೊಂದಿಗೆ ಮಾತನಾಡೇ ಇಲ್ಲ ಎಂದು ರಾಜಪಕ್ಸೆ ಸಿಂಗಾಪೂರ್ಸ್ ಸ್ಟ್ರೈಟ್ಸ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾ ಆರ್ಮಿ ಪಡೆ ಎಲ್‌ಟಿಟಿಇಯನ್ನು ಪರಾಜಯಗೊಳಿಸಿದ ನಂತರ, ಫೋನ್ಸೆಕಾ ವಿರೋಧ ವ್ಯಕ್ತಪಡಿಸಿ ಮಾತನಾಡತೊಡಗಿದ್ದರು. ಬಳಿಕ ಜನವರಿ 26ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಪಕ್ಸೆ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು.

ನಿಜಕ್ಕೂ ನಾನು ಫೋನ್ಸೆಕಾಗೆ ಸಲಹೆ ನೀಡಿದ್ದೆ. ರಾಜಕೀಯ ಎಂದರೆ ಮಿಲಿಟರಿಯಲ್ಲ, ಆರ್ಮಿಯಲ್ಲಿ ನೀವು ಆದೇಶ ಕೊಟ್ಟ ಹಾಗೆ ಅದನ್ನು ಅನುಸರಿಸುತ್ತಾರೆ. ಆದರೆ ರಾಜಕೀಯ ಹಾಗಲ್ಲ, ನೀವು ಆದೇಶ ನೀಡಿದರು ಸಹ ಅದಕ್ಕೆ ಹಲವಾರು ಬಗೆಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಎಂದು ಸ್ಪಷ್ಟಪಡಿಸಿದ್ದೆ. ಆ ನಿಟ್ಟಿನಲ್ಲಿ ರಾಜಕೀಯ ಚದುರಂಗದಾಟ ನಾನು ಚೆನ್ನಾಗಿ ಬಲ್ಲೆ ಹಾಗಾಗಿ ಚುನಾವಣೆಯಲ್ಲಿ ಗೆದ್ದು ಬಂದಿರುವುದಾಗಿ ರಾಜಪಕ್ಸೆ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ