ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾದ ಮಕ್ಕಳ ಚಾನೆಲ್‌ನಲ್ಲಿ ಬೆತ್ತಲೆ ದೃಶ್ಯ ಪ್ರಸಾರ (Kids channel | Time Warner Cable | North Carolina | Playboy Channel)
Bookmark and Share Feedback Print
 
ಅಮೆರಿಕಾದ ಮಕ್ಕಳ ಟಿವಿ ಚಾನೆಲ್‌ಗಳಲ್ಲಿ ವಯಸ್ಕರ ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುವ 'ಪ್ಲೇ ಬಾಯ್' ಚಾನೆಲ್‌ಗಳ ದೃಶ್ಯಗಳನ್ನು ಪ್ರಸಾರ ಮಾಡಿದ 'ಟೈಮ್ ವಾರ್ನರ್ ಕೇಬಲ್' ಕ್ಷಮೆ ಯಾಚಿಸಿದೆ. ಇದು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಅದು ವಿವರಣೆ ನೀಡಿದೆ.

ಅಮೆರಿಕಾದ ಉತ್ತರ ಕೆರೊಲಿನಾದಲ್ಲಿ ಈ ಕೇಬಲ್ ಅವಾಂತರ ಸೃಷ್ಟಿಯಾಗಿತ್ತು. ಇದರಿಂದ ಸಾಕಷ್ಟು ಮಕ್ಕಳು ದೃಶ್ಯವನ್ನು ವೀಕ್ಷಿಸಿ ಮುಜುಗರಕ್ಕೊಳಗಾಗಿದ್ದಾರೆ ಎಂದು ಸಾವಿರಾರು ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ನಡೆದಿರುವುದಕ್ಕೆ ನಮ್ಮನ್ನು ಕ್ಷಮಿಸಿ. ಹೆತ್ತವರ ಕಳವಳವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಎಂದು ಸ್ಥಳೀಯ ಸುದ್ದಿ ಕೇಂದ್ರ 'ವ್ರಾಲ್'ಗೆ ವಾರ್ನರ್ ವಕ್ತಾರರು ತಿಳಿಸಿದ್ದಾರೆ.

ತಾಂತ್ರಿಕ ದೋಷದಿಂದ ನಮ್ಮ ಮಕ್ಕಳ ಚಾನೆಲ್‌ನ ಬೇಡಿಕೆಯ ವಿಭಾಗದಲ್ಲಿ ಬೇರೆ ಚಾನೆಲ್‌ನ ದೃಶ್ಯಗಳು ಕಾಣಿಸಿಕೊಂಡಿದ್ದವು. ಇದು ಹಲವು ಚಾನೆಲ್‌ಗಳ ಮೇಲೆ ಸಮಸ್ಯೆಯನ್ನು ತೋರಿಸಿತ್ತು. ನಮ್ಮ ಗಮನಕ್ಕೆ ಬಂದ ತಕ್ಷಣವೇ ಅದನ್ನು ಸರಿಪಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಎರಡು ಚಾನೆಲ್‌ಗಳ ಬಲಬದಿಯಲ್ಲಿ ಚಿಕ್ಕದಾದ ಮೆನುವಿನಲ್ಲಿ ಮಹಿಳೆಯರು ಅಸಭ್ಯ ಭಂಗಿಗಳಲ್ಲಿರುವ ದೃಶ್ಯಗಳ ಪೂರ್ವಪ್ರಸಾರವಾಗುತ್ತಿತ್ತು.

'ಕಿಡ್ಸ್ ಆನ್ ಡಿಮಾಂಡ್' ಮತ್ತು 'ಕಿಡ್ಸ್ ಪ್ರಿಸ್ಕೂಲ್ ಆನ್ ಡಿಮಾಂಡ್' ಚಾನೆಲ್‌ಗಳ ಮಕ್ಕಳ ಕಾರ್ಯಕ್ರಮ ಮೆನುವೊಂದರಲ್ಲಿ ಬೆತ್ತಲೆ ಮಹಿಳೆಯೊಬ್ಬಳು ಇರುವ ಮುನ್ನೋಟ ದೃಶ್ಯಾವಳಿಯಿತ್ತು. ಈ ಆವಾಂತರ ಮಂಗಳವಾರ ಬೆಳಿಗ್ಗೆ ಆರರಿಂದ ಎಂಟು ಗಂಟೆಯ ಒಳಗೆ ನಡೆದಿತ್ತು.

ಪ್ರಗತಿಪರ ನ್ಯೂಯಾರ್ಕ್ ನಗರದಲ್ಲಿ ನಡೆದಿರುವ ಘಟನೆಯಂತೆ ನಾವು ನುಣುಚಿಕೊಳ್ಳಲು ಯತ್ನಿಸಿಲ್ಲ. ಘಟನೆಗೆ ನಾವು ಕ್ಷಮೆ ಯಾಚಿಸಿದ್ದೇವೆ. ನಮ್ಮ ಗ್ರಾಹಕರಲ್ಲಿ ಹೆಚ್ಚಿನವರು ನಮ್ಮನ್ನು ಕ್ಷಮಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದು ಮತ್ತೊಬ್ಬ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ