ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೊಟ್ಟು ಅಮ್ಮಾನ್ ಸತ್ತಿದ್ದಾನೆ,ಆತನ ಹೆಸರನ್ನು ಕೈಬಿಡಿ: ಲಂಕಾ (Sri Lanka | Interpol | Pottu Amman | LTTE | Velupillai Prabhakaran,)
Bookmark and Share Feedback Print
 
ಎಲ್‌ಟಿಟಿಇ ಗುಪ್ತಚರ ವಿಭಾಗದ ವರಿಷ್ಠ ಪೊಟ್ಟು ಅಮ್ಮಾನ್ ಹೆಸರನ್ನು ಮೋಸ್ಟ್ ವಾಟೆಂಡ್ ಪಟ್ಟಿಯಿಂದ ತೆಗೆದುಹಾಕುವಂತೆ ಶ್ರೀಲಂಕಾ ಸರ್ಕಾರ ಇಂಟರ್‌ಪೋಲ್‌ಗೆ ಮನವಿ ಮಾಡಿಕೊಂಡಿದ್ದು, ಕಳೆದ ವರ್ಷ ಲಂಕಾ ಮಿಲಿಟರಿ ಪಡೆ ಎಲ್‌ಟಿಟಿಇ ವಿರುದ್ಧ ನಡೆಸಿದ ಅಂತಿಮ ಹೋರಾಟದಲ್ಲಿ ಆತ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಆದರೆ ಆತನ ಶವ ಮಾತ್ರ ಕಳೆದ ಹತ್ತು ತಿಂಗಳಿನಿಂದ ಪತ್ತೆಯಾಗಿಲ್ಲ ಎಂದು ಹೇಳಿದೆ.

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿಯೂ ಆತ ಪ್ರಮುಖ ಪಾಲುದಾರನಾಗಿದ್ದ. ಅಲ್ಲದೇ 1996ರಲ್ಲಿ ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ಮೇಲೆ ನಡೆಸಿದ ಬಾಂಬ್ ದಾಳಿಯ ಪ್ರಮುಖ ರೂವಾರಿಯಾಗಿದ್ದ, ಈ ಹಿನ್ನೆಲೆಯಲ್ಲಿ ಪೊಟ್ಟು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ವ್ಯಕ್ತಿಯಾಗಿರುವುದಾಗಿ ತಿಳಿಸಿದೆ.

ಆ ನಿಟ್ಟಿನಲ್ಲಿ ಲಂಕಾ ಸರ್ಕಾರ ಪೊಟ್ಟು ಅಮ್ಮಾನ್ ಹೆಸರನ್ನು ಮೋಸ್ಟ್ ವಾಂಟೆಡ್ ಲಿಸ್ಟ್‌ನಿಂದ ಕೈಬಿಡುವಂತೆ ಇಂಟರ್‌ಪೋಲ್‌ಗೆ ಕೇಳಿಕೊಂಡಿರುವುದಾಗಿ ಲಂಕಾ ಮಿಲಿಟರಿ ಗುಪ್ತಚರ ವರಿಷ್ಠ ಕಪಿಲಾ ಹೆಂದಾವಿತರಣಾ ವಿವರಿಸಿದ್ದಾರೆ.

ಎಲ್‌ಟಿಟಿಇ ಬಂಡುಕೋರರನ್ನು ಬಗ್ಗು ಬಡಿದ ನಂತರ ಸಮರದಲ್ಲಿ ಸಂಘಟನೆಯ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಸೇರಿದಂತೆ ಎಲ್ಲಾ ಪ್ರಮುಖರ ಡಿಎನ್‌ಎ ಪರೀಕ್ಷೆ ನಡೆಸಿತ್ತು. ಆದರೆ ಪೊಟ್ಟು ಅಮ್ಮಾನ್ ಶವವನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿಲ್ಲವಾಗಿತ್ತು. ಅದರೂ ಎಲ್‌ಟಿಟಿಇ ವಿರುದ್ಧ ನಡೆದ ಸಮರದಲ್ಲಿ ಪೊಟ್ಟು ಅಮ್ಮಾನ್ ಸಾವನ್ನಪ್ಪಿರುವುದಾಗಿ ಕಪಿಲಾ ತಿಳಿಸಿರುವುದಾಗಿ ಡೈಲಿ ಮಿರರ್ ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ