ಇರಾನ್ ತಾಲಿಬಾನಿಗಳಿಗೆ ಟನ್‌ಗಟ್ಲೆ ಶಸ್ತ್ರಾಸ್ತ್ರ ನೀಡಿದೆ: ಅಫ್ಘಾನ್
ಲಂಡನ್, ಗುರುವಾರ, 18 ಮಾರ್ಚ್ 2010( 20:47 IST )
ತಾಲಿಬಾನ್ ಉಗ್ರಗಾಮಿ ಸಂಘಟನೆಗೆ ಇರಾನ್ ಟನ್‌ಗಟ್ಟಲೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿರುವುದಾಗಿ ಅಫ್ಘಾನಿಸ್ತಾನ ಮತ್ತು ಪಾಶ್ಚಾತ್ಯ ಅಧಿಕಾರಿಗಳು ಗಂಭೀರವಾಗಿ ಆರೋಪಿಸಿದ್ದಾರೆ.
ತಾಲಿಬಾನಿಗಳಿಗೆ ಪ್ಲಾಸ್ಟಿಕ್ ಸ್ಫೋಟಕ, ಮೋರ್ಟಾರ್ಸ್, ಗ್ರೆನೇಡ್ಸ್ ಹಾಗೂ ತಾಂತ್ರಿಕ ಉಪಕರಣಗಳನ್ನು ಇರಾನ್ ಒದಗಿಸುತ್ತಿದೆ ಎಂದು ದೂರಿದೆ. ಈ ಬಗ್ಗೆ ಚಾನೆಲ್ 4ನ್ಯೂಸ್ ಶಸ್ತ್ರಾಸ್ತ್ರ ಮತ್ತು ದಾಖಲಾತಿಗಳ ಮೂಲಕ, ಕಳೆದ ಕೆಲವು ವರ್ಷಗಳಲ್ಲಿ ಅಫ್ಘಾನಿಸ್ತಾನ ಗಡಿಪ್ರದೇಶಕ್ಕೆ ಸುಮಾರು 10 ಟನ್ಸ್ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿರುವುದಾಗಿ ದಿ ಟೈಮ್ಸ್ ವರದಿ ವಿವರಿಸಿದೆ. ಕೆಲವು ವಾರಗಳ ಹಿಂದೆ ಕೆಲವಷ್ಟನ್ನು ಮಿಲಿಟರಿ ಪಡೆಗಳು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.
ಅಲ್ ಖಾಯಿದಾ ಉಗ್ರರಿಗೂ ಇರಾನ್ ನೆಲೆ ಒದಗಿಸಿಕೊಡುತ್ತಿರುವುದಾಗಿ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿ ಗಂಭೀರವಾಗಿ ಆರೋಪಿಸಿತ್ತು. ಜನರಲ್ ಡೇವಿಡ್ ಪೀಟರ್ಸ್ ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ವರದಿ ಬಹಿರಂಗಗೊಂಡಿದೆ. ಸುಮಾರು ಶೇ.60ರಷ್ಟು ಶಸ್ತ್ರಾಸ್ತ್ರಗಳು ಇರಾನ್‌ನಿಂದ ಸರಬರಾಜಾಗಿರುವುದಾಗಿ ಅಫ್ಘಾನಿಸ್ತಾನದ ಗುಪ್ತಚರ ಇಲಾಖೆ ಕೂಡ ಸ್ಪಷ್ಟಪಡಿಸಿರುವುದಾಗಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರಿಗೆ ಇರಾನ್ ಶಸ್ತ್ರಾಸ್ತ್ರ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿರುವುದಾಗಿ ಅಫ್ಘಾನ್ ಕೂಡ ಆಪಾದಿಸಿದೆ.