ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆರು ಶಿಶುಗಳನ್ನು ಕೊಂದ ಪಾತಕಿ ತಾಯಿಗೆ 15ವರ್ಷ ಜೈಲು! (mother sentenced | killing six babies | French | judge)
Bookmark and Share Feedback Print
 
ಹೆತ್ತ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗುವ ಪ್ರಕರಣವನ್ನು ಕೇಳಿದ್ದೇವೆ. ಆದರೆ ತಾನೇ ಹತ್ತ ನವಜಾತ ಆರು ಶಿಶುಗಳನ್ನು ಉಸಿರುಗಟ್ಟಿಸಿ ಕೊಂದ ಫ್ರೆಂಚ್ ತಾಯಿಯೊಬ್ಬಳಿಗೆ ಫ್ರಾನ್ಸ್ ಕೋರ್ಟ್‌ 15 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಆರು ಪುಟ್ಟ ಮಗುಗಳನ್ನು ಕೊಂದ ಸೆಲಿನೆ ಲೆಸಾಗೆ(38) ಮಾಡಿದ ಅಮಾನವೀಯ ಕೃತ್ಯಕ್ಕೆ 16ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಬೇಕೆಂದು ಪ್ರಾಸಿಕ್ಯೂಟರ್ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಪ್ರಕರಣದ ಗಂಭೀರತೆ ಅರಿತು ಮುಗ್ದ ಹಸುಗೂಸುಗಳನ್ನು ಕೊಂದ ತಾಯಿಗೆ 15ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

'ಹೌದು 1999-2007ರ ನಡುವೆ ಜನಿಸಿದ ಆರು ಕಂದಮ್ಮಗಳನ್ನು ನಾನೇ ಉಸಿರುಗಟ್ಟಿಸಿ ಸಾಯಿಸಿದ್ದೇನೆ' ಎಂದು ಸೋಮವಾರ ಕೌಂಟಾನ್ಸಿಸ್ ಚಾನೆಲ್ ಟೌನ್ ನ್ಯಾಯಾಧೀಶರ ಮುಂದೆ ಲೆಸಾಗೆ ತಪ್ಪೊಪ್ಪಿಕೊಂಡಿದ್ದಳು. ನನ್ನ ಹಸುಗೂಸುಗಳನ್ನು ಕೊಂದ ಬಗ್ಗೆ ಅರಿವಿದೆ. ಯಾಕೆಂದರೆ ಅವುಗಳು ಇಬ್ಬರು ಪುರುಷರಿಗೆ ಹುಟ್ಟಿದ ಮಕ್ಕಳಾಗಿದ್ದವು!. ಆ ಕಾರಣಕ್ಕೆ ನನಗೆ ಬೇರೆ ದಾರಿಯೇ ಇರಲಿಲ್ಲವಾಗಿತ್ತು. ಅಮಾಯಕ ಹಸುಗೂಸುಗಳ ಹತ್ಯೆ ತಪ್ಪು ಎಂಬುದರ ಅರಿವಿತ್ತು, ಆದರೆ ಏನ್ಮಾಡ್ಲಿ ಅನಿವಾರ್ಯ ಸ್ಥಿತಿ ಅದಕ್ಕೆ ಹಾಗೇ ಮಾಡಿದೆ ಎಂಬುದಾಗಿ ಕೋರ್ಟ್ ವಿಚಾರಣೆ ವೇಳೆ ವಿವರಿಸಿದ್ದಾಳೆ.

ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಸಮೀಪ ಹಸುಗೂಸನ್ನು ಕೊಂದು ಕಸದ ಚೀಲದಲ್ಲಿ ಹಾಕಿದ್ದ ಪ್ರಕರಣ ಬಹಿರಂಗಗೊಂಡ ಸಂದರ್ಭದಲ್ಲಿ 2007ರ ಅಕ್ಟೋಬರ್‌ನಲ್ಲಿ ಲೆಸಾಗೆಯನ್ನು ಪೊಲೀಸರು ಬಂಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ