ವಾಣಿಜ್ಯ ನಗರಿ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರನಾದ ಶಂಕಿತ ಉಗ್ರ ಲಷ್ಕರ್ ಇ ತೊಯ್ಬಾದ ಕಮಾಂಡರ್ ಜಾಕಿರ್ ರೆಹಮಾನ್ ಲಕ್ವಿ ತನ್ನನ್ನು ನಿರ್ದೋಷಿ ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾನೆ.
'ನಾವು ಕೆಲವೇ ದಿನಗಳಲ್ಲಿ ಲಾಹೋರ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗುವುದು. ಅಲ್ಲದೇ ಭಯೋತ್ಪಾದನಾ ನಿಗ್ರಹ ಕೋರ್ಟ್‌ನಲ್ಲಿ ಇಡೀ ಪ್ರಕರಣದ ಚಿತ್ರಣವೇ ಬದಲಾಗಲಿದೆ ಎಂಬ ಸ್ವಲ್ಪ ನಂಬಿಕೆ ನಮ್ಮದಾಗಿದೆ ಎಂದು ಲಕ್ವಿ ಪರ ವಕೀಲ ಖ್ವಾಜಾ ಸುಲ್ತಾನ್ ವಿವರಿಸಿದ್ದಾರೆ.
ಲಕ್ವಿಯನ್ನು ನಿರಪರಾಧಿ ಎಂದು ಘೋಷಿಸುವಂತೆ ಕೋರಿ ಬಹುತೇಕ ಸೋಮವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಅಗತ್ಯವಾದ ಪುರಾವೆಗಳಿದ್ದಲ್ಲಿ ಮಾತ್ರ ಲಕ್ವಿ ಕ್ರಿಮಿನಲ್ ಪ್ರೊಸಿಜರ್ ಕೋಡ್ 265ಕೆ ಅನ್ವಯ ನಿರ್ದೋಷಿ ಎಂದು ಘೋಷಿಸಲು ಸುಪ್ರೀಂ ಮೆಟ್ಟಿಲೇರಬಹುದಾಗಿದೆ ಎಂದು ಲಾಹೋರ್ ಹೈಕೋರ್ಟ್ ತನ್ನ 14ಪುಟಗಳ ಆದೇಶದಲ್ಲಿ ಈ ಹಿಂದೆ ತಿಳಿಸಿತ್ತು.