ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೆಕ್ಸ್ ಸಿನಿಮಾಗಳ ನಟರಿಗೆ ಕಾಂಡೋಮ್ ಕಡ್ಡಾಯವಾಗಲಿದೆ (Condoms | porn actors | AIDS | USA)
Bookmark and Share Feedback Print
 
ಅಮೆರಿಕಾದ ಕಾರ್ಯಕ್ಷೇತ್ರದ ಸುರಕ್ಷತಾ ಮಂಡಳಿಯೇನಾದರೂ ಕಠಿಣ ನಿರ್ಧಾರಕ್ಕೆ ಬಂದಲ್ಲಿ ಇಂತಹ ನಿಯಮ ಕಡ್ಡಾಯವಾಗಲಿದೆ. ಹಾಗಾದಲ್ಲಿ ಮುಂದಿನ ದಿನಗಳಲ್ಲಿ ಅಮೆರಿಕಾದ ಸೆಕ್ಸ್ ಸಿನಿಮಾಗಳ ನಟರು ಕಾಂಡೋಮ್ ಧರಿಸದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ.

ಲಾಸ್ ಎಂಜಲೀಸ್ ಮೂಲದ ಏಡ್ಸ್ ಆರೋಗ್ಯ ಜಾಗೃತಿ ಪ್ರತಿಷ್ಠಾನದ ಪ್ರಮಾಣಪತ್ರದ ವಿಚಾರಣೆ ನಡೆಸಲಿರುವ ಕ್ಯಾಲಿಫೋರ್ನಿಯಾದ ಔದ್ಯೋಗಿಕ ಸುರಕ್ಷತಾ ಮತ್ತು ಆರೋಗ್ಯ ಗುಣಮಟ್ಟ ಮಂಡಳಿಯು ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ವಯಸ್ಕರ ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಕಾಂಡೋಮ್ ಧರಿಸುವುದು ಅಗತ್ಯವಿದೆ ಎಂದು ಈ ಪ್ರತಿಷ್ಠಾನವು ಡಿಸೆಂಬರ್ ತಿಂಗಳಲ್ಲಿ ಅರ್ಜಿಯೊಂದನ್ನು ಸಲ್ಲಿಸಿತ್ತು. ನರ್ಸ್‌ಗಳು ಮತ್ತು ವೈದ್ಯರ ಕಾರ್ಯಕ್ಷೇತ್ರಗಳಲ್ಲಿರುವ ಈ ನೀತಿಯನ್ನು ಸೆಕ್ಸ್ ಚಿತ್ರಗಳ ನಟರಿಗೂ ವಿಸ್ತರಿಸಬೇಕೆಂಬುದು ಅದರ ಆಗ್ರಹವಾಗಿದೆ.

ಇತ್ತೀಚಿನ ದಿನಗಳಲ್ಲಿ ಸೆಕ್ಸ್ ನಟ-ನಟಿಯರಲ್ಲಿ ಹೆಚುತ್ತಿರುವ ಏಡ್ಸ್ ಪ್ರಮಾಣವನ್ನು ಕಂಡು ಕಳವಳಗೊಂಡಿರುವ ಸಂಸ್ಥೆ ಇಂತಹ ಒಂದು ಮನವಿಯನ್ನು ಮಾಡಿಕೊಂಡಿದೆ.

ಅಮೆರಿಕಾ ಕಾನೂನಿನ ಪ್ರಕಾರ ವಯಸ್ಕರ ಚಿತ್ರಗಳ ನಟ-ನಟಿಯರು ನಿರ್ದಿಷ್ಟ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ 30 ದಿನಗಳ ಮೊದಲು ಎಚ್‌ಐವಿ ಮತ್ತು ಇತರ ಲೈಂಗಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

ಕಳೆದ ಅವಧಿಯಲ್ಲಷ್ಟೇ ವಯಸ್ಕರ ಚಿತ್ರದ ನಟರೊಬ್ಬರಿಗೆ ಎಚ್‌ಐವಿ ಇರುವುದನ್ನು ಬಹಿರಂಗಪಡಿಸಿದ ನಂತರ ಲಾಸ್ ಅಂಜಲೀಸ್ ವಿರುದ್ಧ ಏಡ್ಸ್ ಆರೋಗ್ಯ ಜಾಗೃತಿ ಪ್ರತಿಷ್ಠಾನವು ಪ್ರಕರಣ ದಾಖಲಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ