ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದ ಸರಕಾರಿ ಜಾಹೀರಾತಿನಲ್ಲಿ ಭಾರತದ ಲೋಗೋ! (Indian logo | Punjab police | India's Punjab state | Pakistan's Punjab Police)
Bookmark and Share Feedback Print
 
ಭಾರತ-ಪಾಕಿಸ್ತಾನಗಳ ಪಂಜಾಬ್ ಪೊಲೀಸ್ ಲಾಂಛನಗಳು...
PR
ಇತ್ತೀಚೆಗಷ್ಟೇ ಭಾರತ ಸರಕಾರ ಮಾಡಿದ ಪ್ರಮಾದವನ್ನು ಈಗ ಪಾಕಿಸ್ತಾನ ಸರಕಾರವು ಮಾಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಭಾರತದ ಪಂಜಾಬ್ ರಾಜ್ಯದ ಲಾಂಛನವನ್ನು ಮುದ್ರಿಸಲಾಗಿದೆ!

ಇದೇ ವರ್ಷದ ಜನವರಿ ತಿಂಗಳಲ್ಲಿ ಭಾರತ ಸರಕಾರವು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದ ಜಾಹೀರಾತಿನಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ಪಾಕಿಸ್ತಾನದ ವಾಯುದಳದ ಮಾಜಿ ಮುಖ್ಯಸ್ಥ ತನ್ವೀರ್ ಮಹಮೂದ್ ಅಹ್ಮದ್ ಅವರ ಚಿತ್ರವನ್ನು ಮುದ್ರಿಸಲಾಗಿತ್ತು. ಇದರ ಬೆನ್ನಿಗೆ ಪಾಕಿಸ್ತಾನವೂ ಮುಜುಗರಕ್ಕೊಳಗಾಗಿದೆ.

ಭಯೋತ್ಪಾದನಾ ದಾಳಿಗಳು ಮತ್ತು ಇತರ ಅಪರಾಧ ಕೃತ್ಯಗಳನ್ನು ತಡೆಯುವ ಸಲುವಾಗಿ ಸಾರ್ವಜನಿಕರು ಎಚ್ಚರಿಕೆಯಿಂದಿದ್ದು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿರುವ ಈ ಪಂಜಾಬ್ ಪೊಲೀಸ್ ಇಲಾಖೆಯ ಜಾಹೀರಾತನ್ನು ಅನೇಕ ಇಂಗ್ಲೀಷ್ ಮತ್ತು ಉರ್ದು ದಿನಪತ್ರಿಕೆಗಳ ಮುಖ ಪುಟದಲ್ಲಿ ಪ್ರಕಟಿಸಲಾಗಿತ್ತು.

ಭಾರತದ ಪಂಜಾಬ್ ಪೊಲೀಸ್ ಇಲಾಖೆಯ ಲಾಂಛನವನ್ನು ಪಾಕಿಸ್ತಾನದ ಪಂಜಾಬ್ ಪೊಲೀಸ್ ಎಂಬ ಬರಹದ ಸಮೀಪ ಜಾಹೀರಾತಿನಲ್ಲಿ ಮುದ್ರಿಸಲಾಗಿದೆ.

ಆದರೆ ಈ ಪ್ರಮಾದಕ್ಕೆ ಜಾಹಹೀರಾತು ಕಂಪನಿಯೇ ಹೊಣೆ ಎಂದು ಪಾಕಿಸ್ತಾನದ ಪಂಜಾಬ್ ಪೊಲೀಸ್ ಮುಖ್ಯಸ್ಥ ತಾರಿಖ್ ಸಲೀಮ್ ಡೋಗರ್ ಆರೋಪಿಸಿದ್ದಾರೆ.

ಈ ಪ್ರಮಾದದ ಬಗ್ಗೆ ಪಾಕಿಸ್ತಾನದ ಹಲವು ಟೀವಿ ಚಾನೆಲ್‌ಗಳು ಭಾರೀ ಪ್ರಮಾಣದಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದು, ಇದು ಮುದ್ರಣ ದೋಷ ಎಂದು ತಾರೀಖ್ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ಪಂಜಾಬ್ ಪೊಲೀಸ್ ಇಲಾಖೆಗಳ ಲಾಂಛನದಲ್ಲಿ ಸಾಕಷ್ಟು ಸಾಮ್ಯತೆಗಳಿರುವುದರಿಂದ ಈ ಪ್ರಮಾದ ನಡೆದಿದೆ. ಆದರೆ ಇದಕ್ಕೆ ಕಾರಣರು ಯಾರು ಎಂಬುದನ್ನು ಪತ್ತೆ ಹಚ್ಚುತ್ತೇವೆ. ಖಂಡಿತಾ ಇದು ಶಿಕ್ಷಾರ್ಹ. ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೋ ಅಥವಾ ಪ್ರಮಾದವೋ ಎಂಬುದನ್ನು ಖಚಿತಪಡಿಸಿಕೊಂಡು ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ