ಅಫ್ಘಾನಿಸ್ತಾನದಲ್ಲಿ ಹೆಲ್ಮಂಡ್ ಪ್ರಾಂತ್ಯದ ಮಾರ್ಜಾ ಪ್ರದೇಶದಲ್ಲಿ ತಾಲಿಬಾನ್ ನಿಯಂತ್ರಣ ಕಳೆದುಕೊಳ್ಳುತ್ತಿದ್ದರೂ, ಲಷ್ಕರ್‌ಬಾಗ್ ಪ್ರದೇಶದಲ್ಲಿ ಇನ್ನೂ ತನ್ನ ಬಿಗಿ ಹಿಡಿತ ಹೊಂದಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ನ್ಯಾಟೋ ಮತ್ತು ಅಫ್ಘಾನ್‌ನ ಹತ್ತು ಸಾವಿರ ಯೋಧರು ಮಾರ್ಜಾ ಪಟ್ಟಣದ ಮೇಲೆ ಹಿಡಿತ ಸಾಧಿಸಿದ್ದರು. ಆದರೆ ಮಾರ್ಜಾದಿಂದ 30ಕಿ.ಮೀ.ದೂರದಲ್ಲಿರುವ ಲಷ್ಕರ್‌ಬಾಗ್‌ನಲ್ಲಿ ಮಾತ್ರ ಇನ್ನು ತಾಲಿಬಾನ್ ಉಗ್ರರು ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣ ಹೊಂದಿದ್ದಾರೆಂಬುದು ಸ್ಥಳೀಯರ ಅಭಿಮತ.
ಮಾರ್ಜಾದಲ್ಲಿ ಈ ಮೊದಲಿಗಿಂತಲೂ ಅಫ್ಘಾನ್ ಪಡೆಗಳು ಹೆಚ್ಚು ನಿಯಂತ್ರಣ ಹೊಂದಿದ್ದಾಗ್ಯೂ ತಾಲಿಬಾನ್ ಉಗ್ರರು ಈಗಲೂ ಬಾಂಬ್ ಸ್ಫೋಟಿಸುತ್ತಿದ್ದಾರೆ. ಆದರೂ ನ್ಯಾಟೋ ಮತ್ತು ಅಫ್ಘಾನ್ ಪಡೆಗಳು ಉಗ್ರರ ಸದ್ದಡಗಿಸಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.